106 ಒಳಮನದ ಬೇಗುದಿ

ಒಳಮನದ ಬೇಗುದಿ

ಮನನೊಂದು ಬೆಂದು ಹೋಗಿದೆ
ಅಸಮಾಧಾನದ ಬೇಗುದಿಯ ಬೆಂಕಿಯಿಂದ..
ಉಸಿರುಗಟ್ಟಿಹೋಗಿದೆ
ಶ್ವಾಸ ತೆಗೆಯಲಾರದಂತೆ
ನೋವಿನ ಬಿಸಿಯ ಹೊಗೆಯಿಂದ..
ಒಳಗೊಳಗೇ.. ನರಳುತ್ತಿದ್ದೇನೆ..
ತಾಳ್ಮೆಯಿಂದಲೇ ಸಹಿಸಿ ದಹಿಸಿ..
ಬೇರೇನು ದಾರಿಯಿದೆ ಹೇಳಿ?
ಅದೆಷ್ಟು ದಿನ ಬೇಯಬೇಕೋ..
ಸಹಿಸಿ ಸಾಯಬೇಕೋ ಅರಿಯೇ..
ಎಲ್ಲವೂ ನಿನಗೊಪ್ಪಿಸಿದ್ದೇನೆ ದೇವ
ಕಾಯುವೆಯೋ..ಕಾಡುವೆಯೋ..
ನಿನಗೆ ಬಿಟ್ಟ ವಿಷಯ
ನನ್ನದಾದರೂ ಏನು ನಡೆಯುತ್ತದೆ ಹೇಳು?.
ನಿನ್ನ ಸೂತ್ರದೊಳಿರುವ ಕೈಗೊಂಬೆ ನಾನು..
ಅಡಿಸಿದರೆ ಆಡುತ್ತೇನೆ.. ಬೀಳಿಸಿದರೆ ಬೀಳುತ್ತೇನೆ
ಆದರೂ ಒಂದು ವಿನಮ್ರ ಮನವಿ
ಕರುಣೆಯಲಿ ಕೈಹಿಡಿದೇತ್ತಿ ನಡೆಸು
ಕ್ಷೋಭೆಯಲಿ ನರಳುತ್ತಿರುವ
ಮನವ ಒಂದೆಡೆ ನಿಲಿಸು
ಸೋತು ಶರಣಾದ ಈ ಜೀವವನುಳಿಸು
ಹೃದಯದಾಸನದಲ್ಲಿ ಬಂದು ನೆಲೆಸು..

           ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ