105 ಭ್ರಮೆಯೇಂಬ ಭಾವಿಯೊಳು


ಭ್ರಮೆಯೇಂಬ ಭಾವಿಯೊಳು

ಏನೋ ಅಗಬೇಕೆಂದಿದ್ದೆ
ಆದರೆ ಮತ್ತೇನೋ ಆಗಿದ್ದೇನೆ
ಅರಿವ ಮರೆತು ಇರುವುದರಲ್ಲೇ
ತೃಪ್ತಿ ಕಾಣುವ ಯತ್ನ ಮಾಡುತ್ತಿರುವೆ
ಭ್ರಮೆಯೇಂಬ ಭಾವಿಯೊಳ್ 
ಬಿದ್ದ ಕೂಪಮಂಡೂಕನಂತಾದೆ.

ಹೊರಪ್ರಪಂಚದ ಅರಿವಿಲ್ಲ
ಇರುವುದೇ ಮೇಲೆಂಬ ಅಹಂ
ಎಲ್ಲ ಬಲ್ಲೆ ಅರಿವುದೇನೂ ಇಲ್ಲ
ನಾನೇ ಸರ್ವಜ್ಞನೆಂಬ ಮತಿ
ಭ್ರಮೆಯೇಂಬ ಭಾವಿಯೊಳ್
ಬಿದ್ದ ಕೂಪಮಂಡೂಕ ನಾನು

ಪ್ರಪಂಚವಿದೆ ವಿಶಾಲ ಪರಿಧಿ
ಅರಿವ ಮನವಿಲ್ಲ ಇಲ್ಲ ನೆಮ್ಮದಿ
ನಾನು ನಾನೆಂಬ ಅಹಮಿನಕೋಟೆಯಲಿ
ಬಂಧಿ ನಾನು..ಜಗವನರಿವುದಿನ್ನೆಲ್ಲಿ?
ಭ್ರಮೆಯ ಭಾವಿಯೋಳ್ ಬಿದ್ದ
ಕೂಪ ಮಂಡೂಕ ನಾನು

ಹೊರಬರಬೇಕಿದೆ ಭ್ರಮೆಯಿಂದ
ಅರಿಯಲಿದೆ ಭ್ರಮೆಯ ಭಾವಿಗಿಂತಲೂ
ವಾಸ್ತವದ ಆಳ ಹೆಚ್ಚೆಂದು
ತೆರೆಯಬೇಕಿದೆ ಅರಿವಿನ ಕಣ್ಣು
ಕೂಪ ಮಂಡೂಕದಂತಾಗದೆ
ಬೆರೆಯಬೇಕಿದೆ ವಾಸ್ತವದ ಜೊತೆಗೆ

              ಶೈಲೂ.....

Comments

Popular posts from this blog

197 ತವರ ಸೆಳೆತ

330 ನಾ ಕಂಡ ಕನಸು

219 ಕದನ