ನನ್ನ ಕವನಗಳು


[9/18, 4:25 PM] Dr || B.N. Shylaja Ramesh: ಬಂದ
ಆನಂದದಿಂದ
ಎನ್ನೊಡೆಯ ಬಂದ
ಪರಮಾನಂದ ತಂದ
ಶ್ರೀ ಕೃಷ್ಣ ಮುಕುಂದ
ಕೊಟ್ಟಿದ್ದನ್ನ ಭಕ್ತಿಯಿಂದ
ಪ್ರೀತಿಯಿಂದಲಿ.ತಿಂದ
ಆಯಿತು ಮನಕಾನಂದ
ಶ್ರೀ ಗೋವಿಂದ ತಂದ
ಭಕ್ತಿಯಾ ಬಂಧ
ಭಕ್ತಿಯಲೆಯಲಿ ತೇಲಿಸಬಂದ
ನಿಜಭಕ್ತಿಗೆ ನಾ ನೊಲಿಯುವೆನೆಂದ
ಇಂದು ನಾ  ನಿನ್ನವನೆಂದ
ಇಂದಾಯಿತೇನಗೆ  ಅಮಿತಾನಂದ
ಶ್ರೀಹರಿ ಗೋವಿಂದ ನಾಮವೇ ಚಂದ
ಭಜಿಸುತ್ತಿದ್ದೇನವನ  ಸಂಭ್ರಮದಿಂದ

                             ಶೈಲೂ.......
[9/18, 4:25 PM] Dr || B.N. Shylaja Ramesh: ಇಂದೆನ್ನ ಮನೆಗೆ  ಕೃಷ್ಣಯ್ಯ ಬರುತ್ತಾನೆ
ನನ್ನೆಲ್ಲ ಭಾಂಧವರೆ ನೋಡಬನ್ನಿ
ಹಸುವಿನಾ ನೊರೆಹಾಲು ಹಸನಾದ ಮೊಸರ್ಬೆಣ್ಣೆ ಅವನಿಗಾಗಿ ತಂದಿರುವೆ
ಕದ್ದು ತಿನ್ನುತ್ತಾನಂತೆ ನೋಡಬನ್ನಿ

ಕೊರಳಲ್ಲಿ ಕೌಸ್ತುಭ ಕೈಯಲ್ಲಿ ಕೊಳಲು
ಕಾಲ್ಗೆಜ್ಜೆ ರಿಂಗಣವ  ಕೇಳಬನ್ನಿ
ಅಂಬೆಗಾಲಿಡುತ್ತಾ ಮುದ್ದುಗರೆವುತ ಬರುತ್ತಾನೆ
ಮುದದಿಂದವನ  ನೋಡಬನ್ನಿ

ವನದ ಸೀಬೆಹಣ್ಣು, ಅಡವಿ ಕಾರೇಹಣ್ಣು
ಮರದ ನೆರಳೆಹಣ್ಣು ಅವನಿಗಿಷ್ಟವಂತೆ  ಕೇಳಬನ್ನಿ
ಅವನಿಗಿಷ್ಟದ್ದೆಲ್ಲ  ಜೋಪಾನಮಾಡಿಟ್ಟಿ ರುವೆ
ಈಗ ತಿನ್ನುತ್ತಾನೆ  ನೋಡಬನ್ನಿ

ಚಕ್ಕುಲಿ ಮುಚ್ಚೋರೆ  ಕರಿದ ಆವಲಕ್ಕಿಯ 
ಮುದದಿಂದ  ಮಾಡಿರುವೆ  ನೋಡಬನ್ನಿ
ತರತರದ ಉಂಡೆಗಳು ಜೊತೆಗೆ ಸಿಹಿ ಅವಲಕ್ಕಿ
ಕಡೆದು ಮಾಡಿದ ಬೆಣ್ಣೆ  ಭಕ್ತಿಯಲಿ ಮಾಡಿರುವೆ  ನೋಡಬನ್ನಿ

ಪುಟ್ಟ ಹೆಜ್ಜೆ ಇಡುತ, ಸದ್ದು ಮಾಡಿ ಮನೆಯಲ್ಲಿ
ಮುದ್ದು ಮುಖವ ಸ್ಪಷ್ಟ ತೋರುತ್ತಾನೆ  ನೋಡಬನ್ನಿ
ಮುದ್ದುಗರೆವುತ ಪಿಸುನುಡಿಯನಾಡಿ ಕಿವಿಯಲ್ಲಿ
ಮಹದಾನಂದ ತರುತ್ತಾನೆ  ಕೇಳಬನ್ನಿ

                   ಶೈಲೂ........
[9/18, 4:30 PM] Dr || B.N. Shylaja Ramesh: ಹೆಜ್ಜೆ ನೋಡೋಣ ಬಾರೆ
ಗೋಪಾಲ ಕೃಷ್ಣನ 
ಪುಟ್ಟ ಹೆಜ್ಜೆ ನೋಡೋಣ ಬಾರೆ

ಹೆಜ್ಜೆ ನೋಡೋಣ ಬಾರೆ
ಗೆಜ್ಜೆಯ ಕಾಲಿನ, ಯಶೋಧ ನಂದನ
ಮೂರ್ಜಗದೊಡೆಯನ.......ಹೆಜ್ಜೆ ನೋಡೋಣ ಬಾರೆ..

ದೇವಕೀಯ ಗರ್ಭದೊಳುದ್ಭವಿಸಿದ  ಹೆಜ್ಜೆ
ವಸುದೇವನನಿಂಗ್ರಿಯನುದ್ದರಿಸಿದಾ ಹೆಜ್ಜೆ
ಯದುಕುಲವಂಶವನು ಪಾವನಗೈದ ಹೆಜ್ಜೆ
ಮಧುರೆಯಾ ಮಣ್ಣಿಗೆ ವರವನಿತ್ತಾ  ಹೆಜ್ಜೆ........

ಪೂತನಿಯ  ವಕ್ಷಸ್ಥಳಕೆ ಗುದ್ದಿದಾ ಹೆಜ್ಜೆ
ಕಾಲಿಂಗನಾ  ಗರ್ವ ಮರ್ಧಿಸಿದಾ  ಹೆಜ್ಜೆ
ಮಾವ ಕಂಸನ ಕೊಂದು ಜಗವನುದ್ಧರಿಸಿದಾ  ಹೆಜ್ಜೆ
ಬೃಂದಾವನದ ಚಂದವ  ಮೆಚ್ಚಿ ಕುಣಿದಾ ಹೆಜ್ಜೆ.......

ಬಾಯಿಯಲೇ ಮಾತೆಗೆ  ಜಗವ ತೋರಿದ ಹೆಜ್ಜೆ
ಮುದ್ದುಗರೆವುತಲೆ ಅಂಗಳದೊಳಾಡಿದಾ  ಹೆಜ್ಜೆ
ಗೋಪಿಯರ ಮನಗೆದ್ದ ಮುದ್ದು ಕೃಷ್ಣನ ಹೆಜ್ಜೆ
ಭಕ್ತಿ  ಭಾವಕೆ ಒಲಿದು ಉದ್ಧರಿಸುವಾ  ಹೆಜ್ಜೆ..... 

ಹೆಜ್ಜೆ  ನೋಡೋಣ ಬಾರೆ,  ಗೋಪಾಲ ಕೃಷ್ಣನ
ಪುಟ್ಟ ಹೆಜ್ಜೆ  ನೋಡೋಣ  ಬಾರೆ..
[9/18, 4:30 PM] Dr || B.N. Shylaja Ramesh: ಅನುಪಮ ಸೊಬಗಿನ
ಮೋಹಕ ರೂಪದ
ಚೆಲುವ ಚೆನ್ನಿಗ ಬಂದ
ಎನ್ನೆಡೆಯ ಗುಡಿಸಲಿಗೆ
ಎನ್ನಯ ಹೃದಯದ ಮೂರ್ತಿ ಬಂದಾ..

ಎದೆಯೊಳವಿನ ಚಿಲುಮೆ,
ಚಿಮ್ಮಿದೆ   ಎಲ್ಲ  ಕಡೆಗೂ  ಸುಮ್ಮನೆ
ಯಾವ.ಸಂಪದವನ್ನು ನೀಡಲಿ
ಹೇಳು ನಿನ್ನೀ ಪದಡೆದೆ........

ಎನ್ನ ಆತ್ಮವೇ ನಿನ್ನದಾಗಿದೆ
ಎನ್ನ  ಹರಣದ ಶರಣು ನಿನಗೆ
ಏನು ನೀಡಲಿ  ಹೇಳು ಮಾಧವ
ನನ್ನದೆಲ್ಲವೂ  ನಿನ್ನದೇ........

ಹೇಗೆ ಸತ್ಕರ ನೀಡಲೆಂಬುದು  ತಿಳಿಯದಾಗಿದೆ
ನಿನ್ನ  ಭಕ್ತಿಯ  ಅಲೆಯಲಿ
ಬಂದು  ಉದ್ಧರಿಸು  ಮಾಧವ
ಇರಲೆನ್ನ ಶಿರ ನಿನ್ನ  ಪಡತಲದಲಿ......
 
              ಶೈಲೂ........
[9/18, 4:31 PM] Dr || B.N. Shylaja Ramesh: ★★ಹೆಣ್ಣು★★

ನವ ಮಾಸ ಧರಿಸಿ
ನೋವ ಭರಿಸಿ
ಅಮೃತವನುಣಿಸಿ
ಕಣ್ಣೀರೊರೆಸಿ, ಕೈ ಹಿಡಿದು ನಡೆಸಿ
ಬದುಕಲು ಕಲಿಸಿ
ಹರಸುವಾ ಮಾತೆ ಹೆಣ್ಣು
ಜನ್ಮದಾತೆ ಹೆಣ್ಣು...........

ಮುದ್ದು ಮಾತನಾಡುತ್ತಾ
ಪುಟ್ಟ ಹೆಜ್ಜೆಯನಿಟ್ಟು ಕಿಲ ಕಿಲ ನಗುತ್ತಾ
ನೋವ  ಮರೆಸುವಾ
ಬದುಕಿಗೆ  ಬೆಳದಿಂಗಳ ನೀವ
ಮುದ್ದು ಮಗಳು  ಹೆಣ್ಣು 
ಸವಿ ರುಚಿಯ  ಹಣ್ಣು..........

ನಸು ನಗೆಯ ಬೀರಿ
ಹುಸಿ ಮುನಿಸ ತೋರಿ
ಲಘು ಜಗಳವಾಡಿ, ನಿಜ ಪ್ರೀತಿ ತೋರಿ
ಮೃಧು ನುಡಿಗಳಾಡಿ
ನೋವು ನಲಿವಿನ  ಭಾಗಸ್ತ್ ಎ
ಮುದ್ದಿನ ಸಹೋದರಿ ಹೆಣ್ಣು
ಅವಳು  ಮನೆಯ ಕಣ್ಣು..........

ತನ್ನವರನ್ನೆಲ್ಲ ಮರೆತು
ಪರಿಚಯವಿಲ್ಲದವರಲಿ  ಬೆರೆತು
ಹೊಸ ರೀತಿ ನೀತಿಗಳನರಿತು
ಪತಿಯಾಣತಿಯಂತೆ  ಕಲೆತು
ಎಲ್ಲರೊಡನೆ ಬೆರೆತು , ನೋವನ್ನು ಮರೆತು
ಜೀವ ತೇಯುವಳು  ಮಡದಿ
ಇವಳೂ ಒಂದು ಹೆಣ್ಣು 
ಬದುಕಿನಾ ಕಣ್ಣು..............

ನೋವಿನಲ್ಲಿ ಸ್ಪಂದಿಸುತ
ನಲಿವಿನಲಿ  ಉಲಿಯುತ
ನೀ  ನಕ್ಕಾಗ ನಕ್ಕು  ಅತ್ತಾಗ  ಅತ್ತು
ಸಾಂತ್ವನವ ಹೇಳುತ್ತಾ
ನೋವ  ಮರೆಸುವಳು  ಗೆಳತಿ
ಅವಳೂ  ಒಂದು  ಹೆಣ್ಣು
ಸಿರಿ ಸ್ನೇಹದ  ಕಣ್ಣು.........

"ಯತ್ರ ನಾರಿ ಪೂಜ್ಯ0ತೇ ರಮಂತೇ ತತ್ರ ದೇವತಾಃ "
ಇದು ವೇದ ವಾಣಿ.
ಇಂಥ  ಸಹೃದಯವಂತೆ  ಹೆಣ್ಣಿನ ಬಗ್ಗೆ  ಕಹಿ ಮಾತನಾಡದಿರಿ ಗೆಳೆಯರೇ, 
ಸ್ನೇಹ ದಿಂದ ಮಾತನಾಡಿದಾಕ್ಷಣ  ತಪ್ಪು ಕಲ್ಪನೆ ಏಕೆ?
ಮೊದಲು ನಿಮ್ಮ ಮನದ ಕೊಳಕನ್ನು ತೆಗೆಯಿರಿ,  ಆಗ  ಜಗತ್ತೇ  ಸ್ನೇಹ ಲೋಕವಾಗುತ್ತೆ............
ಹೆಣ್ಣು......
"ಒಲಿದರೆ ನಾರಿ  ಮುನಿದರೆ  ಮಾರಿ"
ಮಾರಿಯ ಅವತಾರ  ನೋಡ ಬಯಸಿದರೆ  ಪ್ರಳಯ ವಾದೀತು........

                             ಶೈಲೂ.........
[9/18, 4:31 PM] Dr || B.N. Shylaja Ramesh: ಓ,  ಮನದ ಮಲ್ಲಿಗೆಯೇ
ನೀ ಬಾಡಿಹೋಗುವ ಮುನ್ನ
ಸೇರಿಬಿಡು ಮಾಧವನಾ
ಪದ ಕಮಲವನ್ನ..........

 ಬೀರಿ ಪರಿಮಳವನ್ನ
ಹಾಸು ಹಾಸಿಗೆ , ನಿನ್ನ
ಮಾಧವನಾ .ಸಿರಿಪಾದ
ಅಡಿಯಿಡುವೆಡೆಯೆಲ್ಲ........

ಅರಳು  ನಗುತಲಿ ಮೆಲ್ಲ
ಹರಡಿ ಪರಿಮಳವೆಲ್ಲ
ನಗುತ  ಬರುವನು ನಲ್ಲ
ಸಂಕೋಚ  ತರವಲ್ಲ.........

ಸ್ನೇಹ  ಸೌರಭ ಬೀರು
ಮನಕೆ ಮುದವನು .ತೋರು
ಮುದುಡಿ  ಹೋಗುವ  ಮೊದಲು 
ಅವನ ಪದವನು .ಸೇರು.........

ಮನದ ಮಾತದು  ಹೇಳು
ಸಹಜ ಹರುಷವ ತಾಳು
ಇದುವೇ ಕ್ಷಣಿಕದ  ಬದುಕು
ಅವನೊಲುಮೆ  ಹೊಸಬೆಳಕು......

ಓ,  ಮನದ ಮಲ್ಲಿಗೆಯೇ
ನೀ  ಬಾಡಿ  ಹೋಗುವ ಮುನ್ನ
ಸೇರಿಬಿಡು  ಮಾಧವನಾ
ಪದ ಕಮಲವನ್ನ...............

                  ......ಶೈಲೂ.........
[9/18, 4:32 PM] Dr || B.N. Shylaja Ramesh: ಯಾಕೆಲೊ ಮಾಧವ  ಬೇಡವಾದಳೇ  ರಾಧೆ
ದೂರ ಮಾಡುವೆ ಏಕೆ  ಕೂಗಿ ಕರೆದಷ್ಟೂ

ಬೇಕಿತ್ತೆ ಇದು ನನಗೆ ಈ ಪರೀ ತಾತ್ಸಾರ
ಮನಸು ನಿಲ್ಲದು ಕೃಷ್ಣ ಲೀನವಾಗಿದೆ ನಿನ್ನಲೇ||

ಕರೆದೆ, ಬರೀ ಕರೆದೇ ನಾನು ಕೇಳಲೊಲ್ಲದು ನಿನಗೆ
ಯಾಕೀ ಪರಿ ಶೋಧನೆಯು ನಿನ್ನ ನಿಜ ಭಕ್ತಳಿಗೆ||

ನಿಜ, ನನ್ನ ಕೆಲಸಗಳು ಯಾವುದೂ ಮುಗಿದಿಲ್ಲ
ಕನಸು ಮನಸಲು ನೀನೇ  ಕೆಲಸದಾ ಪರಿವಿಲ್ಲ||

ಛಿದ್ರವಾಗಿದೆ, ಮನಸು   ಕೇಳಲೊಲ್ಲದು  ಏನೂ
ಒಮ್ಮೆ ದರುಶನ ನೀಡು  ಜಾಗೃತ ಗೊಳಿಸೂ  ಮನಸ||

ಕೊಳಲ ಇನಿ ದನಿ ಬೇಕು ಮನವು ಅರಳುವುದಾಗ
ನಿನ್ನ ಮೃದು ನುಡಿ ಬೇಕು  ಬಾಳು ಬೆಳಗುವುದಾಗ||

ನಿನ್ನ ದಿವ್ಯ ದರುಷನಕೆ  ಕಾದು  ಕುಳಿತಿಹೆನಿಲ್ಲಿ
ಕರುಣೆ ತೋರಿಸು ಕೃಷ್ಣಾ ಬಂದೆನ್ನ ಉದ್ಧರಿಸು||

                              ಶೈಲೂ............
[9/18, 4:33 PM] Dr || B.N. Shylaja Ramesh: ಭಾವಕ್ಕೆ  ಜೀವ ತುಂಬಿ
ಜೀವಕ್ಕೆ  ಭಾವ ತುಂಬಿ
ಭಾವ  ಜೀವಗಳ
ಬಡಿತ, ಮಿಡಿತ, ಮಿಳಿತ
ಭಾವುಕಳಾಗಿ
ಭಾವಿಸಿ
ಬಿಡಿಸುತಲಿದ್ದೆ  ...

ಭಾವ ಜೀವದ...ಜೀವ
ಭಾವದ
ಬದುಕ ಬವಣೆ
ಬಿಡಿಸಲು
ಭಾವನೆಯ  ಬಳಸುತಲಿದ್ದೆ......

ಬರಡು  ಭಾವನೆ
ಬಿಡಿಸಿ
ಬದುಕ ಬಂಧವ
ಬೆಳೆಸಿ
ಬದುಕು 
ಬಯಸುವ
ಭರವಸೆ  ಬೆಳೆಸುತ್ತಲಿದ್ದೇ......

ಭಾವವನ್ನು 
ಭಾವನೆಯಲಿ
ಬಂಧಿಸಿ
ಬದುಕ ಸಾರ್ಥಕ
ಭಾವದಲಿ ಬದುಕುತಲಿದ್ದೇ......

ಭಾವನೆಗಳರಿಯದ
ಬೀಡಾಡಿ ಜನರ
ಬಂಧನೆ ಮಾತಿಗೆ
ಬೇಸತ್ತು
ಬದುಕು 
ಬೇಸರಾಗಿ
ಭಾಂಧವ್ಯ
ಬರಡಾಗಿ
ಬರೀ ವೇದನೆಯಲಿ0ದು
ಬೇಯುತಲಿದ್ದೇನೆ.........

                    ಶೈಲೂ..........
[9/18, 4:33 PM] Dr || B.N. Shylaja Ramesh: ಇರಲಿ,  
ನೆನಪಿರಲಿ
ನಮ್ಮ ಗೆಳೆತನದಾ
ಸವಿ ನೆನಪಿರಲಿ
ಆ ನೆನಪೇ ಶಾಶ್ವತವೂ
ಅದು ಮೆಚ್ಚಿನ ಗೆಳೆತನವೂ.....

ನಾನಾರೋ
ನೀವ್ಯಾರೋ
ಸ್ನೇಹದಿ ಒಂದಾದೇವೂ
ಕುಲ ನೆಲ 
ಯಾವುದೋ ಏನೋ
ಭೇಧಭಾವವ  ಮರೆತೆವು
ಎಲ್ಲಿರಲಿ
ಹೇಗಿರಲಿ
ನಿಮ್ಮ ಬಾಳಲಿ
ಸುಖವೇ ಇರಲಿ
ನಮ್ಮ ಗೆಳೆತನ .ಚಿರವಿರಲಿ
ನಮ್ಮ  ಗೆಳೆತನ ಚಿರವಿರಲಿ.........

ತೀರದ  ಆಸೆಗಳಾ
ಬತ್ತದ ಬಯಕೆಗಳಾ
ಸುಂದರ ಕನಸುಗಳಾ
ಸಿರಿ.ಸ್ನೇಹದ
ಹಿತ ನುಡಿಯಾ
ನಮ್ಮ ಭಂಧವು
ಹೀಗೆ ಇರಲಿ
ನಮ್ಮ ಗೆಳೆತನ.ಚಿರವಿರಲಿ
ನಮ್ಮ ಗೆಳೆತನ.ಚಿರವಿರಲಿ..........
          
ಆ ನೆನೆಪೇ  ಶಾಶ್ವತವೂ
ಅದು ಮೆಚ್ಚಿನ  ಗೆಳೆತನವೂ.......

                     ಶೈಲೂ.......
[9/18, 4:34 PM] Dr || B.N. Shylaja Ramesh: ಇಂದೆನ್ನ ಮನೆಗೆ ಗುರುದೇವ  ಬರುತಾರೆ
ನೂರಾರು ಜನ್ಮಗಳ ಸುಕೃತದ ಫಲವೇನೋ
ತುಂಬಿರುವ ಅಜ್ಞಾನ ತಮವನ್ನು  ಕಳಿತಾರೆ

"ಶ್ರೀ"  ಗಳು ಮಹಾಮಹಿಮ ತಪೋಧನರು
"ವಿ"   ದ್ಯಾ ವಿನಯ  ಸಂಪನ್ನರವರು
"ಧ್ಯಾ" ನಿಸುತ ಸರ್ವಕಾಲಕ್ಕೂ ಕೃಷ್ಣನ
"ವಾ" ತ್ಸಲ್ಯ ಭಾವದಲಿ ಪರಿಪೂರ್ಣರಾಗಿ
"ರೀ"  ತಿ ರಿವಾಜುಗಳ ಕಟ್ಟಲೆಯ  ಮಧ್ಯದಲು
"ಧೀ"  ಮಂತ ವ್ಯಕ್ತಿತ್ವದಿಂದ  ರಾರಾಜಿಸುತ
"ತೀ"  ರಿಸುತ  ಭಕ್ತರೆಲ್ಲರ  ಸಂಕಷ್ಟ    ಸಾ-
"ರ್ಥ" ಕತೆಯ ಭಾವವನು  ಮನದಲ್ಲಿ  ತುಂಬುತ್ತಾ
ಪರಿಪೂರ್ಣ  ಶುಭಶೀರ್ವಾದ  ತರುತ್ತಾರೆ

"" ಶ್ರೀ  ವಿದ್ಯಾ ವಾರಿಧಿ ತೀರ್ಥ"" ರೆಂಬೋ  ಮಹಾ ಪುಣ್ಯ ತೀರ್ಥದಲಿ  ಮುಳುಗೆದ್ದ  ನಮ್ಮ ಜೀವನವು ನಡೆದಿದೆ  ಸಾರ್ಥಕತೆಯ  ಗುರಿಯೆಡೆಗೆ............
                               ಶೈಲೂ.........
[9/18, 4:34 PM] Dr || B.N. Shylaja Ramesh: ಯಾಕೋ ಇಂದು ಬರೆಯಲು ಮನಸೇಇಲ್ಲ

ಮೂಕವಾಗಿದೆ ಮನಸು
ಬರೆಯಲು ಪದಗಳೇ ಸಿಗುತ್ತಿಲ್ಲ
ರೋದಿಸುತ್ತಿದೆ  ಹೃದಯ
ಮನಸ್ಸಿಗೆ ಏನೂ  ಹೊಳೆಯುತ್ತಲೇ ಇಲ್ಲ
ಭಾವನೆಗಳು  ಬಾಡಿ ಹೋಯ್ತು
ಅಕ್ಷರಗಳು  ಮುಷ್ಕರ ಹೂಡಿವೆ
ಪದಪುಂಜ ಖಾಲಿಯಾಗಿದೆ
ಯಾಕೋ  ಬರೆಯಲು  ಸಾಧ್ಯವಾಗುತ್ತಲೇ ಇಲ್ಲ
ಬರಿದೇ ಹಿಡಿದೆ ಪೆನ್ನು
ಸಮಯ ಕಳೆಯಿತು ಅಷ್ಟೇ
ಭಾವನೆಯ  ಬತ್ತಲಿಕೆಯೇ ಮಾಯವಾಗಿದೆ
ಇದು ನಾ ಹಾಕಿದಾ ಕಟ್ಟಲೆಯ ಕೃಪೆಯೇನೋ
ಘಾಸಿಯಾಗಿದೆ ಮನಕೆ
ರೋಸಿ ಹೋಗಿದೆ ಜೀವ
ಬದುಕೋ ಬಯಕೆ  ಕಮರಿದೆ
ಬುಡವೇ ಕಡಿದಾ ಗಿಡದಂತೆ
ಒಣಗಿ ಹೋಗಿದೆ ಮನಸು
ಮುದದಿಂದ  ಬೆಳೆಸಿದ್ದೆ
ನನ್ನೆದೆ  ನಂದನವ
ಬಾಡಿಹೋಯಿತು ಈಗ
ಬದುಕು ಮುಗಿಯಿತು  ಬೇಗ

ಸಮಯ  ಸರಿಯುತ್ತಿದೆ
ಸಾಧಿಸಬೇಕಿದೆ ನಾನಿನ್ನೇ ನೋ
ಬರಿದೇ ಕಳೆಯಿತು ಹೊತ್ತು
ಮರೀಚಿಕೆಯ ಬೆನ್ನತ್ತಿ

ಮತ್ತೆ  ಚಿಗುರಲು  ವಸಂತ  ಬರಬೇಕು
ಪ್ರೀತಿಯ ಸಿಂಚನವ  ಸಿಂಪಡಿಸಬೇಕು
ಆಗ ಬರುವವೇನೋ ಪದ ಪುಂಜಗಳು ಒಟ್ಟೊತ್ತಿ 
ಅಲ್ಲಿಯ ವರೆವಿಗೂ  ಕಾವ್ಯ ಧಾರೆಗೆ  ವಿಧಾಯ......
                             ಶೈಲೂ.......
[9/18, 4:35 PM] Dr || B.N. Shylaja Ramesh: ಎಲ್ಲಿ ಹೋದನೆನ್ನ ಕೃಷ್ಣ
ಮರಳಿ ಬಾರದೇ
ಕಾಯ್ದು ಕಾಯ್ದು ಸೋತುಹೋದೆ
ಕರುಣೆ ಬಾರದೇ.......

ಕಾಯುತಿಹೇ  ನಂದನದೇ
ಹಾಲು ಬೆಲ್ಲ ಜೇನಿನೊಡನೆ
ಮೊಲ್ಲೆ ಮೊಗ್ಗ ಮಾಲೆ ಪಿಡಿದು
ಕನಸು ಹೊತ್ತ ಕಂಗಳೊಡನೆ
ಮುದ್ದು ಮುಖದ ಸದ್ದು ತೋರಿ
ಸಲಹು ಎನ್ನ ಪೊಡವಿಯೊಡೆಯ......

ಕಾಯುತಿಹೆ ಯಮುನಾ ತೀರದಲ್ಲಿ
ಶುದ್ಧ ಭಕ್ತಿ  ಭಾವದೊಡನೆ
ಪ್ರೀತಿಹೊತ್ತ ಮನಸ್ಸಿನೊಡನೆ
ನಿಷ್ಕಾಮ ಪ್ರೇಮದೊಡನೆ
ಮಧುರ ಮುರಳಿ ಲೋಲ ಬಾರೋ
ಹರಸು ಎನ್ನ ಪೊಡವಿಯೊಡೆಯ........

                          ಶೈಲೂ..........
[9/18, 4:35 PM] Dr || B.N. Shylaja Ramesh: ಎಲ್ಲೋ ದೂರದಿ  ಕೊಳಲಿನ ಇನಿದನಿ ಕೇಳುತಿದೇ ಇಂಪಾಗಿ
ಅದು ನನ್ನಾ ಕೃಷ್ಣನ ಮುರಳೀ ಗಾನವೇ ಹೇಳೆಲೆ ನೀ ಸಖಿ ನಿಜವಾಗಿ

ಮಗುವಿನ ಮನಸಿನ  ಮುಗುದೆ ರಾಧೆಯಾ
ನೋಯಿಸುವುದೂ ಸರಿಯೇನು
ಕರೆದರೂ ಕೇಳದ ನಿರ್ಲಿಪ್ತ  ಭಾವವು
ಮಾಧವ  ನಿನಗೇ  ತರವೇನು.........

ಎಲ್ಲವ  ಮರೆತೂ ನಿನ್ನನೆ ಭಜಿಸುವ
ರಾಧೆಯ ಕಡೆ ನಿನ್ನಾ  ಮನವಿರಲಿ
ದೇವರ ದೇವ  ಕೇಶವ  ಮಾಧವ
ನನ್ನೆಡೆಗೆ ನಿನ್ನ  ನಸು  ನಗುವಿರಲಿ.........

                                  . ... ..ಶೈಲೂ..........
[9/18, 4:37 PM] Dr || B.N. Shylaja Ramesh: 💐💐💐💐💐💐💐💐💐
ಸಾಗುತ್ತಿದೆ ಎನ್ನ  ಮನದ  ಬೃಂಗ
ವೇಣು ಮಾಧವನಾ
ನೀಲ ಕಮಲದಾ
ಮಧುಪಾನದಾ  ಆಸೆಗೆ  ||

ಎನ್ನ  ಮನದೊಡೆಯ ಮಾಧವನಾ
ಪಾದ ಕಮಲ ನೀಲ
ಮಧು ಕುಡಿಯುವ  ಈ  ಬೃಂಗ ನೀಲ
ನೀಲದಲ್ಲಿ  ನೀಲ ಸೇರಿ 
ಲೀ ನ ವಾಗೋ ಪರಿಯ ನಾ ನೆಂತು ಬಣ್ಣಿಸಲಿ ||

ಭಕ್ತಿಯ ಮಧವೇರಿ  ಮತ್ತಾಗಿ
ಸುತ್ತಲಿರುವ  ಜಗತ್ತು  ಮಾಯವಾಗಿ
ನನ್ನ ಚಿತ್ತ ಮಾಧವನಲ್ಲಿ ನೆಟ್ಟು
ವಿಶ್ವರೂಪ  ದರ್ಶಿಸುವಾ ಪರಿಯ  ನಾನೆಂತು  ಬಣ್ಣಿಸಲಿ||

.......ಶೈಲೂ.....
[9/18, 4:38 PM] Dr || B.N. Shylaja Ramesh: ಬೇಸಿಗೆಯ ಉರಿ ಬಿಸಿಲ
ಮಧ್ಯಾನ್ಹದಲ್ಲೊಂದು ದಿನ ನೋಡಿದ್ದೆ
ರಸ್ತೆಗೆ ಸುರಿದಿದ್ದ ಬಿಸಿ ಡಾಂಬರಿನ
ಹಬೆಯ ಮೇಲೊಂದು ಮರಿನಾಗ ಹಾದು ಹೋದ ದೃಶ್ಯ......
 ವಿಲವಿಲ ಒದ್ದಾಡಿತು ಪಾಪ
ಮೇಲೆ ಬಿಸಿಲ ಝಳ
ಕೆಳಗೆ ಕುದಿವ  ಡಾಂಬರು
ಬೇಗ ಸರಿಯಲಾರದೆ, ಉರಿಯ ತಾಳಲಾರದೆ
ಒದ್ದಾಡಿ ಪ್ರಾಣ ಬಿಟ್ಟಿದ್ದ ನಾಗ.......
ಅಯ್ಯೋ ಎಂದು ಮರುಗಿದವರ ಮಧ್ಯದಲ್ಲಿ
ವಿಷಸರ್ಪ ಸತ್ತಿತು, ಒಳ್ಳೆಯದಾಯ್ತೆಂದು
ಹಿರಿ ಹಿರಿ ಹಿಗ್ಗಿದವರೆಷ್ಟೋ
ಚೀರಿ  ಹೇಳಿದ್ದೆ  ಆಗ
ನಿಮಗಿಂತ  ವಿಷವೇ ಅದು?
ಸಿಕ್ಕವರ ನೆತ್ತರನ್ನು  ಹೀರುವ  ರಾಕ್ಷಸರು ನೀವು
 ತೊಂದರೆ ಕೊಡುವವರಿಗಷ್ಟೇ ಬುಸುಗುಟ್ಟುವ  ಈ  ನಾಗ
ನಿಮಗಿಂತಲೂ  ಸಾವಿರ ಪಾಲು  ಮೇಲು..... 
ದುಃಖದಿಂದ ದನ್ನ ಸಂಸ್ಕರಿಸಿ
ಶ್ರೀ ಕ್ಷೇತ್ರದಲ್ಲೊಮ್ಮೆ ಪೂಜೆ ಮಾಡಿಸಿ ಬಂದಿದ್ದೆ..

ಇಂದು  ನಾಗನಾ ಪೂಜಿಸುವ ಪುಣ್ಯದಿನ
ಒಡಹುಟ್ಟಿದವರ ಕ್ಷೇಮ ಕೋರಲು ಆರಾಧಿಸುವ ದಿನ
ಹೊಟ್ಟೆ ತಣ್ಣಗೆ ಬೆನ್ನು ತಣ್ಣಗೆ ಇಟ್ಟಿರು ನನ್ನ  ಸಹೋದರರನ್ನು
ಎಂದು ಹಾಲೆರೆಯುವಾಗ.......
ವಿಲಿವಿಲೀ ಒದ್ದಾಡಿ ಪ್ರಾಣ ಬಿಟ್ಟ  ಆ
ಮರಿನಾಗನಾ ದೃಶ್ಯ  ಕಣ್ಮುಂದೆ ನಿಂತು ಕಾಡಿತ್ತು
ಕಾಡನ್ನೆಲ್ಲ  ನಾಡು ಮಾಡುವಾ ಭರದಲಿ
ಜೀವ ಸಂಕುಲದ  ಮಾರಣ ಹೋಮ ಮಾಡುವ
ಈ  ಮನುಜ ಕುಲದ ವಿರುದ್ದ  ಚೀರಿತ್ತು  ನನ್ನ ಮನಸು
ಹೇ ದೇವ ನಿನಗೆ.ರಕ್ಷಣೆ ಕೊಡದಾ, ನಮ್ಮನ್ನು
ರಕ್ಷಿಸು ಎಂದು  ಬೇಡುವುದು ಅದ್ಯಾವ ನ್ಯಾಯ...

ಆದರೂ  ಬೇಡುತಿಹೆ ಸುಖದಿಂದಿಟ್ಟಿರು ನನ್ನೆಲ್ಲ  ಸಹೋದರರನ್ನು............
                              ಶೈಲೂ........
[9/18, 4:39 PM] Dr || B.N. Shylaja Ramesh: ನಂದನ ವನದಲಿ
ಕುಳಿತಿಹ  ರಾಧೆಗೆ
ಕೃಷ್ಣನದೇ  
ಸವಿನೆನೆಪು...

ಎಂದೂ  ಬಾರದ
ಕೃಷ್ಣನ  ನೆನೆಯುತ
ಕಾಣುವಳು  ತಾ
ಸವಿಗನಸು.....

ಮಾಧವನೊಲಿಯದ
ಈ  ರಾಧೆಯ  ಜೀವನ
ಅರ್ಥವಿಲ್ಲದ
ಒಗಟ0ತೆ...

ಕರುಣೆಯ ತೋರಿ
ಕಣ್ತೆರೆದರೆ ಕೃಷ್ಣನು
ಹಾಲು ಜೇ ನಿನಾ
ಹೊಳೆಯಂತೆ.....

ಶೈಲೂ.......
[9/18, 4:41 PM] Dr || B.N. Shylaja Ramesh: ಕೃಷ್ಣನ ಕಾಣದ  
ಅವನಿಗೆ  ಬಾಗದ
ಹೇಳೆಲೆ
ಈ  ತನು ವಿನ್ನೇಕೆ...

ನಂದನ  ಕಂದನ
ಮೋಹಕ  ಮುಗುಳ್ನಗೆ
ಕಾಣದ
ಈ ಜೀವೇನ ಬೇಕೇ....

ಕೃಷ್ಣನ ಕಾಣದ
ಪ್ರತಿ ಕ್ಷಣ ಕ್ಷಣವದು
ಯುಗ ಕಳೆದಂತೆಯೇ
ತೋರುವುದು...

ಕೇಳೇ  ಗೆಳತಿ
ಕೃಷ್ಣನ  ಕಾಣದೆ
ಈ  ಮನ
ಬಲು  ನೋಯುವುದೂ....

ಎಲ್ಲೋ ದೂರದಿ  ಕೊಳಲಿನ  ಇನಿದನಿ
ಕೇಳುತಿದೇ  ಇಂಪಾಗಿ
ಅದು ನನ್ನಾ ಕೃಷ್ಣನ  ಮುರಳೀ ಗಾನವೇ
ಹೇಳೆಲೆ ನೀ  ಸಖಿ ನಿಜವಾಗಿ......

                        ಶೈಲೂ.....
[9/18, 4:41 PM] Dr || B.N. Shylaja Ramesh: ರೀ..  ಇವತ್ತು sunday ,ಸದ್ಯ ಇರ್ತೀರಲ್ಲ ಇವತ್ತಾದ್ರೂ ನಂಜೊತೆ ಅಂದದ್ದಕ್ಕೆ,  ಪ್ರತೀ sunday ನಿಂಜೊತೇನೆ ಇರ್ತೀನಲ್ಲ  ಇವತ್ತೆನ್ special,  ಅಂದ  ನನ್ನವರಿಗೆ,
ಅಲ್ಲಾರೀ...  ಇವತ್ತು ಭೀಮನಮಾವಾಸ್ಯೆ, ಗಂಡನ ಪೂಜೆ ಮಾಡ್ಬೇಕಲ್ಲ..  ಅಂದಾಕ್ಷಣ..ಗಾಬರಿಯಿಂದ  ಮೇಲೆದ್ದು " ಪ್ರತಿ ದಿನ ಮಾಡ್ತೀಯಲ್ಲ  ಪೂಜೆ ಇವತ್ತಿನ್ನೇನ್ special, office ನಿಂದ call ಬಂದಿದೆ ಸ್ವಲ್ಪ  ಕೆಲ್ಸ ಇದೆ  ಬರ್ತೀನಿ ಅಂತ  shirt ಹೆ ಗಲ್ಗೇರಿಸ್ಕೊಂಡು ಹೊರಟೆ ಬಿಡೋದೆ ಪುಣ್ಯಾತ್ಮ..
         ಅತೀವ  ನಿರಾಸೆ  ಆಗಿ ಕಣ್ಣಲ್ಲಿ ನೀರ್ತುಂಬಿ  ಕುಳಿತವಳಿಗೆ  ಬಾಲ್ಯಕ್ಕೆ  ಎಳೆದಿತ್ತು  ಮನಸ್ಸು...
ಅಮ್ಮ  ಮಾಡಿಸುತ್ತಿದ್ದ  ಗಂಡನಪೂಜೆ,,  
         ಹೊಸ  ಜರಿ ಲಂಗ ಹಾಕಿ, ಉದ್ದನೆ ಜಡೆ ಹೆಣೆದು ,  ಕೈತುಂಬಾ  ಬಳೆ, ತಲೆ ತುಂಬಾ  ಹೂ ಮುಡಿಸಿ  ಮಧುಮಗಳಂತೆ  ಸಿಂಗರಿಸುತ್ತಿದ್ದಳು ಅಮ್ಮ, 
         ಮಣ್ಣಿನಲ್ಲಿ ಗೊಂಬೆ ಮಾಡಿ,  ಕೆಮ್ಮಣ್ಣು ಹಚ್ಚಿ, ಸುಣ್ಣದ ಚಿಕ್ಕ ಚಿಕ್ಕ ಚುಕ್ಕಿ  ಇಟ್ಟು...  ನೋಡು  ಇದೇ  ನಿನ್ನ  ಗಂಡ  ಇವನಿಗೆ  ಪೂಜೆ  ಮಾಡಬೇಕು,  ಎಂದ  ಅಮ್ಮನ  ತುಸು  ಮುನಿಸಿನಿಂದ  ನೋಡಿ, ನಸು ನಾಚಿ, ಲಜ್ಜೆ ಮಿಶ್ರಿತ  ಭಕ್ತಿಯಿಂದ  ಪೂಜಿಸಿ,  ಕೈಗೆ  ದಾರ ಕಟ್ಟಿ, ಹೊಸ್ತಿಲ ಮೇಲೆ   ಅಣ್ಣನಿಂದ  ಬಂಡಾರ ಹೊಡಿಸಿ......
       ಓ ಹೋ.....  ಏನು  ಆ  ಸಂಭ್ರಮ....
        ಆದರೆ  ಇಂದು?....
      ರಜೆ ಇದ್ದರೂ  ನನ್ನ  ಪತಿರಾಯ  ಮನೆಯಲಿಲ್ಲ..   ದುಃಖ  ಉಮ್ಮಳಿಸಿ ಬಂದು  ಕಣ್ಮುಚ್ಚಿದೆ....
      ಮೃದುವಾದ  ಕೈ  ಕೆನ್ನೆ  ಸೋಕಿ  ಕನ್ಬಿಟ್ಟಾಗ ...
ಮಲ್ಲೆ  ಮೊಗ್ಗಿನಾ  ದಂಡೆ, ಸಿಹಿ ತುಂಬಿದ  ಡಬ್ಬ, ಚಂದದ  ರೇಷ್ಮೆ  ಸೀರೆ ಕೈಯಲಿಡಿದು  ನಸು ನಗುತ್ತ  ನಿಂತಿದ್ದರು  ನನ್ನ  ಪತಿ, 
       ಪೂಜೆ  ಮಾಡಿದಾ  ನನ್ನ  ಮುದ್ದು  ಮಡದಿಗೆ  ನಾನೇನು. ಕಾಣಿಕೆ  ಕೊಡಬೇಡವೆ?   ಹಾಗಾಗಿ  ತರಲು  ಹೋದೆ,  ಬೇಸರ ವಾಯ್ತೆ?  ಎಂದಾಗ  ಸ್ವರ್ಗ  ನನ್ನ  ಮನೆಯಲ್ಲೇ....

     ಕಣ್ತುಂಬಿ,  ಮನತುಂಬಿ,  ಎದೆತುಂಬಿ  ಮಾಡಿದಾ  ಇಂದಿನ  ಗಂಡನ  ಪೂಜೆ  ಸಂಪನ್ನವಾಯ್ತು.....

                      ಶೈಲೂ........
[9/18, 4:42 PM] Dr || B.N. Shylaja Ramesh: ಕೃಷ್ಣ ಕೃಷ್ಣ  ಎಂದು 
ಹಂಬಲಿಸಿದೆ ಮನ
ಮಾಧವ ಎಲ್ಲಿಹೆ
ಮರೆಯಾಗಿ...

ಕಾಣದೆ ಅರೆಕ್ಷಣ
ನಿಲ್ಲದು ಜೀವನ
ಬಾರೇಲೋ ಬೇಗನೆ 
ನನಗಾಗಿ........

ತಾಳೆನು ಈ  ಬಗೆ
ವಿರಹದ  ವೇದನೆ
ಕೃಷ್ಣನಿಲ್ಲದೆ
ನಾನಿರೇನೇ...

ಹೋಗೆ  ಗೆಳತಿ
ಕೃಷ್ಣನ  ಕರೆತಾರೆ
ಕೃಷ್ಣನೇ ನನ್ನ ಪ್ರಿಯ
ವಲ್ಲಭನು.......

ಎಲ್ಲೋ ದೂರದೆ  ಕೊಳಲಿನ  ಇನಿದನಿ
ಕೇಳುತಿದೇ  ಇಂಪಾಗಿ
ಅದು ನನ್ನ ಕೃಷ್ಣನ ಮುರಳೀ ಗಾನವೇ
ಹೇಳೆಲೆ ನೀ  ಸಖಿ  ನಿಜವಾಗಿ..............

                            ಶೈಲೂ.......
[9/18, 4:43 PM] Dr || B.N. Shylaja Ramesh: ಎಲ್ಲ  ಕವಿಗಳ ಕವನಕ್ಕೆ 
ಸ್ಫೂರ್ತಿ ನಾರಿ..
ನಿನ್ನ ಕಾವ್ಯಕ್ಕೆ ಸ್ಫೂರ್ತಿ ಯಾರೆಂದು 
ಕೇಳಿದಾ ಗೆಳೆಯನಿಗೆ..
ನಾ ಹೇಗೆ ಹೇಳಲಿ
ಗೆಳೆಯ....
ನೀನೇ ನನ್ನ  ಕಾವ್ಯಧಾರೆಗೆ
ಸ್ಪೂರ್ತಿಯೆಂದು....

ಹೇಳಿದರಾಯ್ತಾಷ್ಟೇ.....

ಮುಗಿಯಿತು  ಎನ್ನ
ಕೆನ್ನೆಯಾ ಕಥೆ........

                            ಶೈಲೂ......

Comments

Popular posts from this blog

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ