358 ನ್ಯಾನೋ ಕಥೆ

#ನ್ಯಾನೊಕಥೆ

#ವಿಷಯ #ದೊಡ್ಡಸ್ತಿಕೆ

ರೇಖಾಳ ಗಂಡ ಸರ್ಕಾರಿ ನೌಕರ, ಒಳ್ಳೆ ಸಂಬಳ, ಜೊತೆಗೆ ಗಿಂಬಳ, ಹಾಗಾಗಿ ಒಳ್ಳೇ ಜೀವನ ನಡೆಸ್ತಾಯಿದ್ರು. ಹಾಗಾಗಿ ರೇಖಾಗೆ ಜಾಸ್ತಿ ಜಂಬ, ದೊಡ್ಡಸ್ತಿಕೆ. ತನ್ನ ಮೈದುನ ಸಾಧಾರಣ ಉದ್ಯೋಗ, ಸಾಧಾರಣ ಸಂಬಳದಲ್ಲಿ ಜೀವನ ನಡೆಸುತ್ತಿದ್ದುದೇ ಕಷ್ಟದಲ್ಲಿ, ಅವನ ಹೆಂಡತಿ ಇದ್ದುದರಲ್ಲೇ ಅಚ್ಚುಕಟ್ಟಾಗಿ ಜೀವನ ನಡೆಸುತ್ತಿದ್ದರೂ, ಸಮಯ ಸಿಕ್ಕಾಗಲೆಲ್ಲ ರೇಖಾಳ ಹೀಯಾಳಿಕೆ ಮಾತು ಕೇಳಿ ನೊಂದಿದ್ದಳು. ಒಬ್ಬರ ದುಡಿತ, ಬಡವರನ್ನಾಗಿಸಿಟ್ಟಿದೆ ತಾನೂ ದುಡಿದರೆ ಸರಿಹೋದೀತು ಎಂದು ಟೈಲರಿಂಗ್ ಕೆಲಸ ಮಾಡಹತ್ತಿ, ಒಳ್ಳೇ ಹೆಸರು, ದುಡ್ಡು ಮಾಡಿ ರೇಖಾಳ ಸರಿಸಮಕ್ಕೆ ಅಲ್ಲದಿದ್ದರೂ ಮೊದಲಿಗಿಂತ ನೆಮ್ಮದಿ ಜೀವನ ನಡೆಸುತ್ತಿರುವಾಗಲೇ, ಲಂಚ ಸ್ವೀಕಾರದ ಆರೋಪದಡಿ ಬಂದಿಯಾದ ರೇಖಾಳ ಗಂಡ. ಇದ್ದುದ್ದನ್ನೆಲ್ಲಾ ರೈಡ್ ಮಾಡಿ ಜೀವನಕ್ಕೂ ಕಷ್ಟ ಆದಾಗ ಅವಳ ಕೈ ಹಿಡಿದದ್ದು, ರೇಖಾಳ ಮೈದುನನ ಹೆಂಡತಿ. ಈ ಘಟನೆಯಿಂದ ರೇಖಾಳ ದೊಡ್ಡಸ್ತಿಕೆ ಮಣ್ಣುಪಾಲಾಯ್ತು

       ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ