356 ತಿಳಿಯುವ ಬಾ

#ಶಿಶುಗೀತೆ

#ತಿಳಿಯುವಾ_ಬಾ

ಹೇ ಚಿನ್ನು ನೋಡು ಬಾ ಆಕಾಶ
ಅದೇನಲ್ಲಿ ಮಿನುಗುತಿಹ ಪ್ರಕಾಶ.?
ಉರಿಯುತಿದೆ ಅಲ್ಲಿ ಕೆಂಡದುಂಡೆ.!
ಉರಿದರೂ ಅದು ಕಪ್ಪಾಗಿಲ್ಲ ನೋಡೇ.!

ಬಣ್ಣವೇನೋ ಚಂದ ಆ ಕೆಂಪು ಕೆಂಪು
ಬರಬರುತ್ತಾ ಹೇಗಾಗುತ್ತೆ ತಂಪುತಂಪು.?
ಉರಿದುರಿದು ಮಾಯವಾಯ್ತು ಸಂಜೆಗೆ
ಕೆಂಪಗಿದ್ದದ್ದು ರಾತ್ರಿ ಹೇಗಾಯ್ತು ಬೆಳ್ಳಗೆ.?

ಬೆಳಕಲ್ಲಿ ರವಿಯಂತೆ ರಾತ್ರಿ ಚಂದ್ರ
ಬೆಳಕೀವವನೊಬ್ಬ, ಇನ್ನೊಬ್ಬ ಬಾನಲಾಂದ್ರ.!
ಒಂದೇ ಆಕಾಶ..ಆಳುವವರೇಕಿಬ್ಬರು.?
ಈ ಕತ್ತಲಬೆಳಕಾಟಕೆ ನಾನಾದೆ ಬೆಬ್ಬರು..!

ಇದೆಂಥಾ ಕೌತುಕ....! ಅಲ್ಲವೇನು.?
ಸವಿವರ ಅರಿತುಕೊಳ್ಳಬೇಕಿದೆ ನಾನು
ತಿಳಿಯಬೇಕೆಂದರೆ ಓದಬೇಕು ವಿಜ್ಞಾನ
ಬಾ.. ಓದಿ ಅರಿಯುವಾ ಸುಜ್ಞಾನ..!

          ಶೈಲೂ.....

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ