352 ಜಗಜ್ಯೋತಿ ಬಸವೇಶ್ವರ

ಜಗಜ್ಯೋತಿ ಬಸವೇಶ್ವರ
*********************

ಕಾಯಕವೇ ಕೈಲಾಸ ದುಡಿದರಿಹುದು ಉಲ್ಲಾಸ
ದುಡಿಮೆಯಲಿಹನು ದೇವರು ಶ್ರದ್ಧೆಯಿಂದ ದುಡಿಯುತಿರು

ದಯೆಯಲಿಹುದು ಧರ್ಮ ಕರುಣೆಯದರ ಮರ್ಮ
ಮೂಢನಂಬಿಕೆಯ ಮೌಢ್ಯ ಅಳಿಸಿ ಬಿಸುಟು ಆಗುನೀ ಪ್ರೌಢ

ಜಾತಿವಿಜಾತಿಯಾವುದಿಹುದು ಜಗಕಿಹುದೊಂದೆ ಜಾತಿ
ಭಕ್ತಿಯ ಬಾಂಡ ದೊಳಗಿಹ ಶಿವಶರಣರಿಗಿಲ್ಲ ಯಾವ ಜಾತಿ

ಭಕ್ತಿ ಚಳುವಳಿಯ ಹರಿಕಾರ ಇಷ್ಟಲಿಂಗವದರಾಧಾರ
ಜಾತಿಬೇಧಗಳಿಗಿತ್ತಿತ್ತು ಕೊನೆ ಅನುಭವ ಮಂಟಪದ ಮಹಾಮನೆ

ಏನಗಿಂತ ಕಿರಿಯರಿಲ್ಲೆಂಬ ಸರಳ ಸಜ್ಜನಿಕೆಯ ಶರಣಾಗತಿ
ಶಿವಶರಣರಿಗಿಂತ ಹಿರಿಯರಿಲ್ಲೆಂಬ ಅನುಭವದ ಮಹಾಮತಿ

ಹಸಿದವರಿಗೆ ಅನ್ನವಿಕ್ಕುವ ಮಹಾ ಅನ್ನದಾನ ದಾಸೋಹ
ಇಷ್ಟಲಿಂಗ ಪೂಜಾಕೈಂಕರ್ಯ ಸಾಕಾರ ಶಿವನಿಗಿಷ್ಟು ಸನಿಹ

ದೇಹವಿದು ದೇಗುಲ ನಿಜಭಕ್ತಿಯಲರ್ಚಿಸಲವನು ಸಲಿಲ
ಮೃದುವಚನವೇ ಮಂತ್ರ ಆ ದೇವನೊಲಿಯುವಿಕೆಯ ತಂತ್ರ

ನೀಡಿ ವಚನಾಮೃತ ವಾಣಿ ಬಸವಣ್ಣ ನೀವಾದಿರೆಲ್ಲರ ಕಣ್ಮಣಿ
ಕ್ರಾಂತಿಯ ಹರಿಕಾರ ನಿಜಗುಣ ಭಕ್ತಿ ಭಂಡಾರಿ ಬಸವಣ್ಣ

ಜಗವ ಬೆಳಗಿದ ಜ್ಯೋತಿ ಮಹಾ ಮಾನವತಾವಾದಿ ಬಸವಣ್ಣ
ದೇವನೊಲಿಯುವ ಪರಿಗಿಹುದು ಶರಣು ಶರಣಾರ್ಥಿ ಶರಣ್ಯ

             ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ