ಸಹಜತೆ ಇರಲಿ

#ಸಹಜತೆ_ಇರಲಿ

ಕೆಳಗಿಳಿದು ಹರಿಯುವುದೇ
ಜಲದ ನಿಜ ಗುಣವಯ್ಯ
ಜೀವ ಜೀವಗಳುಳಿಸೆ
ಪ್ರಕೃತಿ ಚೇತನಗೊಳಿಸೆ
ಬೀಸುವುದು ಗಾಳಿಯ ಗುಣ
ಹಿರಿದಾದರೂ  ಸರಿಯೇ 
ಕಿರಿದಾದರೂ  ಸರಿಯೇ
ಮುಟ್ಟಿದೊಡನೆಯೇ ದಹಿಸುವುದು
ಅಗ್ನಿಯ ಸಹಜ ಗುಣ
ಭೇಧಭಾವವ ತೋರದಲೇ
ಸರ್ವರಿಗೂ  ಸಮಶಾಖ
ನೀಡುವುದು ರವಿಯ ಗುಣ
ಹರಿಸಿ ಶೀತಲ ಕಾಂತಿ
ಅಳಿಸಿ ಮನದ ಭ್ರಾಂತಿ
ಸರ್ವರಿಗೂ  ತಂಪೆರಲು
ನೀಡುವುದು ಶಶಿಯ ಗುಣ
ಯಾವುದೂ ತೋರದು ಬೇಧವನು
ಮರೆಯದು ತನ್ನ ತನವನು
ಎಲ್ಲರನೂ  ಸಮತೆಯಲಿ
ಕಾಣ್ವುದೇ ಸೃಷ್ಟಿಯ ತತ್ವ
ಆದರೆ.. ಹೀಗೇಕೆ ..ನೀ ಮನುಜ.
ಮರೆತೆ ಮನುಷ್ಯತ್ವ..
ನಿಜಗುಣವ ನೀ   ಮರೆತು
ಪಡೆದೆಯೇಕೆ ಮೃಗೀಯಭಾವ
ದ್ವೇಷಾಸೂಯೆಯ ಪ್ರಭಲ ಕಿಚ್ಚಿನಲಿ
ಸರ್ವರನೂ ದಹಿಸುತ ನೀನೂ  ಭಸ್ಮವಾಗುತಿಹೆ
ಅರಿವಾಗುತ್ತಿಲ್ಲ ನಿನಗೆ ನಿನ್ನ ಅದಃಪತನ
ನೀ ಅಂದುಕೊಂಡಿರಬಹುದು ನೀನೇ ಜಾಣ
ಕಣ್ತೆರೆದು ನೋಡೋಮ್ಮೆ
ಹೃದಯಾಂತರಾಳವನು
ಹರಿಸು ಎಲ್ಲರೆಡೆಗೆ ಮಾನವೀಯತೆಯನು
ಹೃದಯ ಕದವನು ತೆರೆದು
ಅಪ್ಪಿ ಎಲ್ಲರೊನ್ನೊಮ್ಮೆ , ಹರಿಸು
ಕರುಣರಸವ  ಎಲ್ಲರೊಡನೆ
ಸಹಜತೆಯಲಿ ಬಾಳು
ದೂಡು ದ್ವೇಷದ ಹಗೆಯ
ಹೊರದೂಡು ವಿಷಾನಿಲ
ಸಿರಿ ಸ್ನೇಹದ ತಂಗಾಳಿ
ಬೀಸಿ ಬದುಕ ಹಸಿರಾಗಿಸು..

           ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ