345 ಚಿತ್ರ ಕವನ ( ಮಸನದಲ್ಲಿ ಮಮತೆ)

#ಮಸಣದಲ್ಲಿ_ಮಮತೆ

(ಈ ಚಿತ್ರಕ್ಕೆ, ಹಾಗೂ ಶೀರ್ಷಿಕೆಗೆ ಈ ಕವನ ಎಷ್ಟರ ಮಟ್ಟಿಗೆ ಹೊಂದುತ್ತೋ ಗೊತ್ತಿಲ್ಲ...
ಆದರೆ ಈ ಚಿತ್ರ ನೋಡಿದಾಕ್ಷಣ ನನ್ನ ಮನದಲ್ಲಿ ಮೂಡಿದ ಸಾಲುಗಳಿವು😊)

ಬದುಕಯಾತ್ರೆ ಮುಗಿದಾಕ್ಷಣ ಮರಣ ಶಯ್ಯೆ ಸನ್ನಿಹಿತ..!
ಕೊರಗಿ ನಲುಗಿ ಬದುಕುವುದಕ್ಕಿಂತ ಮರಣವೇ ಬಲು ಹಿತ..!

ಹುಟ್ಟು ನಮ್ಮ ಕೈಯಲ್ಲೇನಿಲ್ಲ ಸಾವೂ ಕೂಡ ಅವನಧೀನ..!
ಎಷ್ಟೇ ಬಾಳಿ ಬದುಕಿದರೂ ಕೊನೆಗೆ ಖಂಡಿತ ಪರಾಧೀನ..!

ಹುಟ್ಟಿದ್ದೆಲ್ಲಾ ಸಾಯಲೇಬೇಕು ಬೇಡವೆಂದರೂ ಪುನರಪಿ ಜನನ..!
ಹುಟ್ಟಿದ ಮೇಲೆ ಹೆಸರುಗಳಿಸಬೇಕು, ಮತ್ತದೇ ಪುನರಪಿ ಮರಣ..!

ಸಾವಿನಾಚೆಗೇನಿಹುದು ನಿಗೂಢ ಸತ್ತವರೆಲ್ಲ ಹೋದರೆಲ್ಲಿ?..!
ತನ್ನೊಡಲಲ್ಲೇ ಅಡಗಿಸಿಹುದು ಬ್ರಹ್ಮಾಂಡ ಸತ್ತವರಾತ್ಮಕೆ ಬೆಳಕು ಚೆಲ್ಲಿ.!

ದೇಹಕ್ಕಷ್ಟೇ ಮರಣ ಸಂಸ್ಕಾರ ಆತ್ಮವಿಹುದು ನಿತ್ಯ ಸತ್ಯ ನಿರಂತರ..!
ಹಳೆಉಡುಪು ಬದಲಿಸಿದಂತೆ ಮತ್ತೊಂದು ದೇಹದಿ ಆತ್ಮಸಂಚಾರ..!

ಹುಟ್ಟುಸಾವು ಸೃಷ್ಠಿಯ ನಿರಂತರ ಪ್ರಕ್ರಿಯೆ ಮಾಗಿದ ದೇಹ ಮಣ್ಣಾಗಬೇಕು..!
ಬದುಕಿದ್ದಾಗ ಸತ್ಯಮಾರ್ಗದಲ್ಲಿದ್ದು ಸಾವಿನಾಚೆಗೂ ಹೆಸರುಳಿಸಬೇಕು..!

     ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ