339 ಇದೇನಿದು ಕೃಷ್ಣ.?

ಹೇ ಕೃಷ್ಣ........
ಎನಿದೇನಿದು ನಿನ್ನೀ ಕಥೆ..... ವ್ಯಥೆ....
ಜಗದೋದ್ಧಾರಕನು ನೀನು
ಉದ್ಧರಿಸ ಬಂದೆ ನಮ್ಮೆಲ್ಲರನು
ಪೊಡವಿಗೊಡೆಯ  ನೀನು
ಆಯ್ದುಕೊಂಡೆಯೇಕೆ ನಿನ್ನ ಹುಟ್ಟಿಗೆ ಕಾರಾಗೃಹವನು
ಅನಾಥರಕ್ಷಕನು ನೀನು
ತೊರೆದೆಯೇಕೆ  ತಾಯ್ತ0ದೆಯನು
ಸರ್ವಜನಪ್ರಿಯ ನೀನು...  ಆದರೂ..
ಅಪ್ರಿಯವಾದೆಯೇಕೆ  ಮಾವನಿಗೆ ನೀನು
ಸರ್ವ ರಕ್ಷಕನು ನೀನು...  ಆದರೂ..
ರಕ್ಷಣೆಯಿಲ್ಲವಾಯ್ತೆಕೆ  ನಿನಗೆ?
ದುಷ್ಟದಮನನು  ನೀನು
ದುಷ್ಟರಿಂದಲೇ  ನಿನಗೆ  ತೊಂದರೆಯಾಯ್ತೆಕೆ?
ಜಗತ್ತಿಗೇ  ಉಣಿಸುವ  ಜಗತ್ಪಾಲಕನು ನೀನು
ಕುಡಿದೆಯೇಕೆ ಪೂತನಿಯ  ವಿಷಪೂರಿತ  ಹಾಲನ್ನು
ಸರ್ವಜನರ ಪ್ರಿಯ ಬಂಧು ನೀನು...    ಆದರೂ...
ಪಡೆದೆಯೇಕೆ ದ್ವೇಷಿಸುವ  ಬಾಂಧವರನು
ರಾಕ್ಷಸಾಂತಕ ನೀನು....  ನಿಜ...
ಹಸಿಗೂಸಾದಾಗಲೇ  ಸಂಹರಿಸಬೇಕಾಯ್ತೇ ರಕ್ಕಸರನು
ಜಗವ ಪಾಲಿಪ ಸ್ವಾಮಿ ನೀನು
ಆಗಬೇಕಾಯ್ತೆಕೋ ನೀ  ಗೋಪಾಲಕನು
ಸಮಸ್ತ್ರರಿಗೆ  ಅನ್ನ ಕೊಡುವ ಅನ್ನ ದಾತನು ನೀನು
ಆದರೂ  ಕದ್ದು ತಿಂದೆಯೇಕೆ  ಪಾಲ್ಬೆಣ್ಣೆಯನು
ತಿನ್ನಬೇಕಾಯ್ತೆಕೋ ಅಡವಿಯ ಹಣ್ಣುಗಳನ್ನು
ಜಗದ ಸೂತ್ರಧಾರನು.ನೀನು
ಬಂಧಿಸಿದಳೇಕೆ ಯಶೋಧೆ ಕಟ್ಟಿ ನಿನಗೆ  ಸೂತ್ರವನು
ಶೇಷಶಯನನು  ನೀನು,
ದ್ವೇಷಿಸಿದನೇಕೆ  ನಿನ್ನ ಕಾಳಿಂಗನು
ಸಮಸ್ತ ಸೃಷ್ಟಿಯ ಒಡೆಯನು ನೀನು
ಆದರೂ , ಕರೆಯಿಸಿಕೊಂಡೆಯೇಕೆ ಕಳ್ಳ ನೆಂದು ನೀನು
ಸಮಸ್ತ ಸಂಕಟ ಪರಿಹಾರಕನು ನೀನು
ಆದರೂ .ಅನುಭವಿಸಬೇಕಾಯ್ತೇ ಅನೇಕ ಸಂಕಷ್ಟ ವನು
ಸೃಷ್ಟಿಯ ಸಂಚಾಲಕನು ನೀನೆಂದು ತೋರಿಸಲೆಂದೇ
ಆದೆಯಾ ಅರ್ಜುನನಿಗೆ ಸಾರಥಿಯಾಗಿ
ಲೋಕೋದ್ಧಾರಕನಾದರೂ ಕರೆಯಿಸಿ ಕೊಂಡೆಯೇಕೆ
ಮೊಸಗಾರನೆಂದು, ಮಾಯಾವಿಯೆಂದು
ಸುಂದರ ಸೃಷ್ಟಿಯ ಸೃಷ್ಟಿಕರ್ತನು ನೀನು
ಆದರೂ ಸೃಷ್ಟಿಸಿದೆಯೇಕಿಂಥಾ ಬಾಂಧವರನು
ಇವೆಲ್ಲಾ ನಿನ್ನ ದೈವವತ್ವವನ್ನು ಪ್ರಕಟಿಸಲೆಂದು ತಿಳಿದಿದ್ದರೂ.......  ನೋವಾಗುತ್ತಿದೆ  ನನಗೆ
ಏಕೆಂದರೆ...............
ಇಂಥ  ಯಾವ ಕಷ್ಟದ ಅರಿವೂ ಇಲ್ಲದವಳು ನಾನು
ಪ್ರಿಯ ಮಾಧವಾ...............
ನೀನು ನನ್ನ ಜೀವರ ಜೀವ..........
ಹಾಗೆಂದೇ ಕೊಟ್ಟಿಲ್ಲ ನನಗೆ ಕಷ್ಟಗಳ ನೀನು.........
ಅಲ್ಲವೇನೂ??........
                                   ಶೈಲೂ..............

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ