336 ಕೃಷ್ಣಯ್ಯ ಬರುತಾನೆ

ಇಂದೆನ್ನ ಮನೆಗೆ  ಕೃಷ್ಣಯ್ಯ ಬರುತ್ತಾನೆ
ನನ್ನೆಲ್ಲ ಭಾಂಧವರೆ ನೋಡಬನ್ನಿ
ಹಸುವಿನಾ ನೊರೆಹಾಲು ಹಸನಾದ ಮೊಸರ್ಬೆಣ್ಣೆ ಅವನಿಗಾಗಿ ತಂದಿರುವೆ
ಕದ್ದು ತಿನ್ನುತ್ತಾನಂತೆ ನೋಡಬನ್ನಿ

ಕೊರಳಲ್ಲಿ ಕೌಸ್ತುಭ ಕೈಯಲ್ಲಿ ಕೊಳಲು
ಕಾಲ್ಗೆಜ್ಜೆ ರಿಂಗಣವ  ಕೇಳಬನ್ನಿ
ಅಂಬೆಗಾಲಿಡುತ್ತಾ ಮುದ್ದುಗರೆವುತ ಬರುತ್ತಾನೆ
ಮುದದಿಂದವನ  ನೋಡಬನ್ನಿ

ವನದ ಸೀಬೆಹಣ್ಣು, ಅಡವಿ ಕಾರೇಹಣ್ಣು
ಮರದ ನೆರಳೆಹಣ್ಣು ಅವನಿಗಿಷ್ಟವಂತೆ  ಕೇಳಬನ್ನಿ
ಅವನಿಗಿಷ್ಟದ್ದೆಲ್ಲ  ಜೋಪಾನಮಾಡಿಟ್ಟಿ ರುವೆ
ಈಗ ತಿನ್ನುತ್ತಾನೆ  ನೋಡಬನ್ನಿ

ಚಕ್ಕುಲಿ ಮುಚ್ಚೋರೆ  ಕರಿದ ಆವಲಕ್ಕಿಯ 
ಮುದದಿಂದ  ಮಾಡಿರುವೆ  ನೋಡಬನ್ನಿ
ತರತರದ ಉಂಡೆಗಳು ಜೊತೆಗೆ ಸಿಹಿ ಅವಲಕ್ಕಿ
ಕಡೆದು ಮಾಡಿದ ಬೆಣ್ಣೆ  ಭಕ್ತಿಯಲಿ ಮಾಡಿರುವೆ  ನೋಡಬನ್ನಿ

ಪುಟ್ಟ ಹೆಜ್ಜೆ ಇಡುತ, ಸದ್ದು ಮಾಡಿ ಮನೆಯಲ್ಲಿ
ಮುದ್ದು ಮುಖವ ಸ್ಪಷ್ಟ ತೋರುತ್ತಾನೆ  ನೋಡಬನ್ನಿ
ಮುದ್ದುಗರೆವುತ ಪಿಸುನುಡಿಯನಾಡಿ ಕಿವಿಯಲ್ಲಿ
ಮಹದಾನಂದ ತರುತ್ತಾನೆ  ಕೇಳಬನ್ನಿ

                   ಶೈಲೂ........

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ