335 ಹೆಜ್ಜೆ ನೋಡೋಣ ಬಾರೆ

ಹೆಜ್ಜೆ ನೋಡೋಣ ಬಾರೆ
ಗೋಪಾಲ ಕೃಷ್ಣನ 
ಪುಟ್ಟ ಹೆಜ್ಜೆ ನೋಡೋಣ ಬಾರೆ

ಹೆಜ್ಜೆ ನೋಡೋಣ ಬಾರೆ
ಗೆಜ್ಜೆಯ ಕಾಲಿನ, ಯಶೋಧ ನಂದನ
ಮೂರ್ಜಗದೊಡೆಯನ.......ಹೆಜ್ಜೆ ನೋಡೋಣ ಬಾರೆ..

ದೇವಕೀಯ ಗರ್ಭದೊಳುದ್ಭವಿಸಿದ  ಹೆಜ್ಜೆ
ವಸುದೇವನನಿಂಗ್ರಿಯನುದ್ದರಿಸಿದಾ ಹೆಜ್ಜೆ
ಯದುಕುಲವಂಶವನು ಪಾವನಗೈದ ಹೆಜ್ಜೆ
ಮಧುರೆಯಾ ಮಣ್ಣಿಗೆ ವರವನಿತ್ತಾ  ಹೆಜ್ಜೆ........

ಪೂತನಿಯ  ವಕ್ಷಸ್ಥಳಕೆ ಗುದ್ದಿದಾ ಹೆಜ್ಜೆ
ಕಾಲಿಂಗನಾ  ಗರ್ವ ಮರ್ಧಿಸಿದಾ  ಹೆಜ್ಜೆ
ಮಾವ ಕಂಸನ ಕೊಂದು ಜಗವನುದ್ಧರಿಸಿದಾ  ಹೆಜ್ಜೆ
ಬೃಂದಾವನದ ಚಂದವ  ಮೆಚ್ಚಿ ಕುಣಿದಾ ಹೆಜ್ಜೆ.......

ಬಾಯಿಯಲೇ ಮಾತೆಗೆ  ಜಗವ ತೋರಿದ ಹೆಜ್ಜೆ
ಮುದ್ದುಗರೆವುತಲೆ ಅಂಗಳದೊಳಾಡಿದಾ  ಹೆಜ್ಜೆ
ಗೋಪಿಯರ ಮನಗೆದ್ದ ಮುದ್ದು ಕೃಷ್ಣನ ಹೆಜ್ಜೆ
ಭಕ್ತಿ  ಭಾವಕೆ ಒಲಿದು ಉದ್ಧರಿಸುವಾ  ಹೆಜ್ಜೆ..... 

ಹೆಜ್ಜೆ  ನೋಡೋಣ ಬಾರೆ,  ಗೋಪಾಲ ಕೃಷ್ಣನ
ಪುಟ್ಟ ಹೆಜ್ಜೆ  ನೋಡೋಣ  ಬಾರೆ..

          ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು