333. ನೋಡು ಬಾ ನಮ್ಮೂರ

#ಸ್ಪರ್ಧೆಗಾಗಿ

#ನೋಡು_ಬಾರಾ_ನಮ್ಮೂರ_ಸೊಬಗು

ನೋಡು ಬಾ ಗೆಳೆಯ ನಮ್ಮೂರ
ವಿವಿಧತೆಗಳ ಸೊಬಗ ತವರೂರ
ಪ್ರಪಂಚದ ನಾನಾ ತಾಣಗಳ
ಜನಜಂಗುಳಿಗುಂಟಿಲ್ಲಿ ನೆಲೆ

ಕೆಂಪೇಗೌಡರ ಬೆಂದಕಾಳೂರು
ಕರ್ನಾಟಕದ ರಾಜಧಾನಿ ನನ್ನ ತವರು
ಸಿಲಿಕಾನ್ ಸಿಟಿಎಂಬ ಹೆಸರು
ತಂತ್ರಜ್ಞಾನದಲ್ಲಿ ಮೇರು

ನಗರ ದೇವತೆಯಿಲ್ಲಿ ಅಣ್ಣಮ್ಮ
ಜನತೆಯ ಸದಾ ಕಾಪಿಡುವಳಮ್ಮ
ಅವಳ ಜೊತೆಗಿದೆ ಸಕಲ ದೇವಗಣ
ನಿರಂತರ ರಕ್ಷಣೆಯಲ್ಲೇ ಮನ

ಹಳ್ಳಿಯ ಸೊಗಡಿನ ಜಾತ್ರೆಯಿದೆ
ಬಸವನ ಕಡಲೆಕಾಯಿ ಪರಿಷೆ
ಬೃಹತ್ ಬಸವನ ಜೊತೆ ಗಣಪ
ನಂಬಿಬಂದವರನ್ನೆಲ್ಲ ರಕ್ಷಿಪ

ಸಂಕ್ರಾಂತಿಯ ಬೆರಗಿಗಿಲ್ಲಿ ಸಾಕ್ಷಿ
ಗವಿ ಗಂಗಾಧರೇಶ್ವರ ದೇಗುಲ
ಸ್ವಾಮಿ, ಭಕ್ತನ ಪ್ರೀತಿಗಿಲ್ಲಿ ಸಾಕ್ಷಿ
ರಾಮಾನಂಜನೆಯ ಗುಡ್ಡ

ವಿಶಾಲ ಉದ್ಯಾನದ ಜೀವಂತಿಕೆ
ವಿಖ್ಯಾತ ಲಾಲ್ಬಾಗ್ ಕಬ್ಬನ್ಪಾರ್ಕ್
ವ್ಯಾಪಾರೋದ್ಯಮಕೇ ಹೆಸರು
ಸಾಂಸ್ಕೃತಿಕತೆಗೂ  ಉಸಿರು

ಇಲ್ಲಿ ಇಲ್ಲವೆಂಬುದೇ ಇಲ್ಲ
ಪ್ರೀತಿಗೂ ಸೈ ದ್ವೇಷಕ್ಕೂ ಜೈ
ಆಚಾರ ವಿಚಾರಕ್ಕಿದೆ ತಾವು
ಅನೈತಿಕತೆ ಅನಾಚಾರದ ಟಾವು

ವಿಸ್ಮಯದ ಭ್ರಮಾಲೋಕ
ವಿಲಾಸ ಜೀವನಕೆ ನಾಕ
ಜೊತೆಗಿದೆ ವಿವಿಧ ಪ್ರಾಂತ್ಯಗಳ
ಹೆಸರಾಂತ ಬಗೆಬಗೆಯ ನಳಪಾಕ

ಜಗವ ಸುತ್ತದಿದ್ದರೂ ಸರಿ
ಇಲ್ಲೇ ಇದೆ ಸರ್ವ ಜಗದ ಸಿರಿ
ಇದು ನನ್ನ ಮೆಚ್ಚಿನ ತವರೂರು
ನನ್ನ ಹೆಮ್ಮೆಯ ಬೆಂಗಳೂರು

   ಶೈಲಜಾ ರಮೇಶ್

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ