323 ಹೀಗೇಕೆ ನಮ್ಮ ಬದುಕು

#ಕಥನ_ಕವನಸ್ಪರ್ಧೆ

#ಹೀಗೇಕೆ_ನಮ್ಮ_ಬದುಕು?

ಹೀಗೇಕೆ ನಮ್ಮ ಬದುಕು
ತಿನ್ನಲಿಲ್ಲ ಹೊಟ್ಟೆ ತುಂಬ ಅನ್ನ
ಉಡಲೂ ಇಲ್ಲವಲ್ಲ ಮೈತುಂಬ ಬಟ್ಟೆ
ನಮ್ಮ ಪಾಪವೇನಿಹುದು ಇಲ್ಲಿ
ನಾವೇಕಾದೆವು ಬಡವರು?

ಇರಲೊಂದು ಸೂರಿಲ್ಲ
ನಮ್ಮದೆನಿಸುವ ಸ್ಥಳವಿಲ್ಲ
ಕೊಳವೆಗಳೇ ನಮ್ಮ ಅರಮನೆ
ಹರುಕುಮುರುಕಿನ ಹೊದಿಕೆ
ನಾವೇಕಾದೆವು ಬಡವರು?

ಬೇಡಿ ತಿನ್ನುವ ಕರ್ಮ
ಆಯ್ಕೆಗಳೇನಿದೆ ನಮಗಿಲ್ಲಿ
ಕೈನೀಡಿ ಕೊಟ್ಟದ್ದಷ್ಟೇ ಪರಮಾನ್ನ
ಕೇಳುವರಾರಿಲ್ಲ ಸುಖದುಃಖ
ನಾವೇಕಾದೆವು ಬಡವರು?

ಆಟಪಾಠಗಲಿಲ್ಲ ಎಮಗೆ
ಶಾಲೆಯಂತೂ ಕನ್ನಡಿಯ ಗಂಟು
ವಿದ್ಯೆಎಂಬುದು ಹಣವುಳ್ಳವರಿಗೆ ಮಾತ್ರ
ಇನ್ನೆಲ್ಲಿಯದು ಅಕ್ಷರದ ಜ್ಞಾನ.?
ನಾವೇಕಾದೆವು ಬಡವರು
 
       ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ