310 ಪರಿಸರ

#ಪರಿಸರ

ಸ್ವರ್ಗವೇ ಧರೆಗಿಳಿದಂತೆ.!
ಈ ಭವ್ಯ ಪ್ರಕೃತಿ ಮಾತೇ
ನದಿ ನದ ನೆಲ ಜಲ ಸುಂದರ
ರಸಋಷಿಯ ಕಾವ್ಯವೀ ಪರಿಸರ.!

ಎಲ್ಲೆಲ್ಲಿ ನೋಡಲಿ ಹಸಿರು.!
ಪರಿಸರ ನಮ್ಮೆಲ್ಲರ ಉಸಿರು
ಬಾನೆತ್ತರಕ್ಕೆ ಚಾಚಿದ ತರುಗಳು.!
ಸ್ವಚ್ಛಂದ ಹಾರುವ ಖಗಗಳು.!

ಸುತ್ತಲೂ ಗಗನಚುಂಬಿ ಪರ್ವತ.!
ತಣ್ಣನೆ ಬೀಸುವ ಮಂದಮಾರುತ
ಅದ್ಭುತವೀ ಸೃಷ್ಟಿಯ ಸೊಬಗು
ನಿಸರ್ಗ ದೇವತೆಗಿದು ಮೆರುಗು.!

ರಕ್ಷಿಸಬೇಕಿದೆ ಹಾಳುಗೆಡವದೇ
ಕಾಪಿಡುವ ಹೊಣೆ ನಮ್ಮದೇ.!
ಸ್ವಚ್ಛವಿದ್ದರೇ ತಾನೇ ಪರಿಸರ.!
ನೆಮ್ಮದಿಯ ಬದುಕಿಗೆ ಆಧಾರ.!

        ಶೈಲಜಾ ರಮೇಶ್

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು