ಸಂಘರ್ಷ


ಸಂಘರ್ಷ


ಜೀವನವೇ ಒಂದು ಸಂಘರ್ಷ
ಬದುಕು ಬವಣೆಗಳೊಡನೆ ಹೋರಾಟ
ಮೊಗದಲ್ಲಿ ತೋರಿಕೆಯ ಹರ್ಷ
ನೋವುನಲಿವಿನೊಂದಿಗೆ ನಿತ್ಯ ಕಾದಾಟ

ಬಂಧವಿರದ ಸಂಬಂಧಗಳೊಡನೆ ಸಂಘರ್ಷ
ಸಂಕೋಲೆಗಳ ಮುಕ್ತಿಗೆ ಹೋರಾಟ
ಭಾವ ಬಂಧನಕ್ಕೆಲ್ಲಿದೆ ಹರ್ಷ
ಸಮತೋಲನಕ್ಕೆ ನಿತ್ಯ ಕಾದಾಟ

ಆಸ್ತಿ ಅಂತಸ್ತಿಗೂ ಸಂಘರ್ಷ
ದುಡಿಮೆಗಿಹುದಿಲ್ಲಿ ನಿಲ್ಲದ ಹೋರಾಟ
ಕೈಚೆಲ್ಲಿ ಕುಳಿತರೆಲ್ಲಿದೆ ಹರ್ಷ
ಮೇಲುಕೀಳೆಂದು ನಿತ್ಯ ಕಾದಾಟ

ಸಂಘರ್ಷಗಳಲೇ ದೂಡುತಿದೆ ಬದುಕು
ಸಂತಸಕೆಲ್ಲಿದೆ ಇಲ್ಲಿ ಸ್ಥಿರ ನೆಲೆ
ಎಲ್ಲ ಬದಿಗೊತ್ತಿ ಸಂತೃಪ್ತಿಯ ಹುಡುಕು
ಸ್ಥಿತಪ್ರಜ್ಞನಾದಾಗಲೇ ಜೀವನಕೆ ಬೆಲೆ

          ಶೈಲೂ........

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು