ಅರ್ಥವಾಗದೇನು???

ಅರ್ಥವಾಗದೇನು???
********************

ಕಾಯುವುದೇ  ಆಯ್ತೇನಗೆ ಕೆಲಸ
ಕಣ್ನಿಮಿರಿಸಿಕೊಂಡು
ಕಣ್ಣಾಗಿಸಿ ಮೈಯೆಲ್ಲಾ
ಕಾಣುವಷ್ಟು ದೂರಕ್ಕೂ
ಕಣ್ಹಾಯಿಸುತ್ತಾ
ಕಾಣದ ರಾಮನಿಗಾಗಿ
ಕಾಯುವ  ಶಬರಿಯಂತೆ...!!!

ಹಗಲು ರಾತ್ರಿಯ ಪರಿವಿರದೇ
ಹಸಿವು ನೀರಡಿಕೆಗಳ
ಹಂಗಿರದೇ.... ಕಾಯ್ದೆ
ಹಾಡುತ್ತಾ ನಿನ್ನದೇ ನಾಮ
ಹಮ್ಮು - ಬಿಮ್ಮುಗಳ ಬಿಟ್ಟು
ಹಾತೊರೆದೆ ನಿನ್ನಾಗಮನಕೆ
ಹಾರಾಡಿದಂತೆ ಆಗಸದಿ....!!!

ನಟ್ಟಿರುಳ  ಭಯವಿರದೆ
ನಾ ಕಾದೆ ನಿನಗಾಗಿ
ನಾನನುಭವಿಸಿದ  ನೋವು
ನಿರಾಶೆ ತಬ್ಬಲಿತನ ದ  ಬೇಗೆ
ನಿನಗರ್ಥವಾಗದು  ಏಕೆ ??
ನಾನೆಷ್ಟು ಪರಿತಪಿಸಲಿ ಇನ್ನೂ
ನವಿರಾದ  ಭಾವನೆಯು
ನಿನಗರ್ಥವಾಗದು  ಏನು...???

ಇಲ್ಲ....  ಬಿಟ್ಟುಬಿಡುವೆ 
ಇಂದಿನಿಂದ ಕಾಯುವ ತವಕ
ಇಷ್ಟು ಸಾಕು..  ಸತಾಯಿಸಿದ್ದು
ಇಷ್ಟ ಮೂರ್ತಿ ನೀನೆನಗೆ
ಇಷ್ಟೇಕೆ  ಬಿಗುಮಾನ ??
ಇಷ್ಟು ಸಾಲದೇ ಪಟ್ಟ ಕಷ್ಟದ ಲೆಕ್ಕ
ಇಮ್ಮಡಿಸಬೇಕೇನು ವಿರಹದ ಬೇಗೆ ..??

           ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು