ಕವಿಯ ಕನಸಲಿ ಬಂದ ಕಾವ್ಯಕನ್ನಿಕೆ


ಕವಿಯ ಕನಸಲಿ ಬಂದ ಕಾವ್ಯಕನ್ನಿಕೆ
****************************

ನೀನಾರ ಕುಂಚದ ಕಲೆಯೋ
ಅದಾವ ಸುರಶಿಲ್ಪಿ ಕಡೆದಿಟ್ಟ
ಶಿಲ್ಪಕಲೆಯ ಚೆಲುವ ಬಲೆಯೋ
ಕವಿ ಕಾಳಿದಾಸನ ಕಾವ್ಯ ಕಲೆಯೋ

ಅದಾವ ಘಳಿಗೆಯಲಿ ಕಡೆದಿಟ್ಟನೋ
ಬ್ರಹ್ಮ ನಿನ್ನ ಸೃಷ್ಟಿಯಲ್ಲಿ ಮನಸಿಟ್ಟನೋ
ತಿದ್ದಿ ತೀಡಿದ ಅಪೂರ್ವ ರೂಪರಾಶಿ
ಕವಿ ಕಾವ್ಯ ಕಲ್ಪನೆಯ ನಿಜರೂಪಸಿ

ಹರಿಣಗಳ ನಡೆಯ ಚಂಚಲ ನಯನ
ಸಂಪಿಗೆಯೆಸಳ ನೀಳ ನಾಸಿಕದ ವದನ
ಜೋಡಿಸಿಟ್ಟಂತೆ ದಂತ ದಾಳಿಂಬೆ ಪಂಕ್ತಿ
ಮರುಳು ಮಾಡೋ ಕೆನ್ನೆಗುಳಿಯ ಸೂಕ್ತಿ

ಆ ಸೇಬಿನ ಕೆನ್ನೆಯದನೇನದ್ಭುತ..!!
ನಯವಾದ ನವನೀತದಂತೆ ಸೆಳೆತ
ಆ ಚೆಲುವಧರದಲಿ ಜೇನು ತುಂಬಿ
ಸವಿಯಲು ಹಾರುತಿದೆ ಮುಂಗುರುಳ ದುಂಬಿ

ಕವಿಕನಸಲಿ ಬಂದ ಕಾವ್ಯಕನ್ನಿಕೆ ನೀನೇ
ಸೆಳೆದು ಮನದಲಿ ನಿಂತ ಮದನಿಕೆಯೇನೆ?
ವರ್ಣನೆಗೆ ನಿಲುಕದ ನೀ ಸೌಂದರ್ಯ ರಾಶಿ
ಕವಿಕಾವ್ಯಕೆ ಸ್ಫೂರ್ತಿ ನೀನೇ ಷೋಡಶಿ

           ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು