ಮೌನದ_ಅಲೆಯಲಿ_ತೇಲುತಲಿ


#ಮೌನದ_ಅಲೆಯಲಿ_ತೇಲುತಲಿ

ಭಾರವಾಗಿದೆ ಮನಸು ಏತಕೋ ಕಾಣೆ ಮುನಿಸು
ಅಲ್ಲೋಲ ಕಲ್ಲೋಲ ಕದಡಿ ಚಡಪಡಿಸುತಿದೆ ಮನಸು
ನೆನಪ ಭಾರಕೆ ನಲುಗಿ ಸೋತು ಹೋಗಿದೆ ಜೀವ
ಮನದ ಶರಧಿಯಲಿ ಭಾವಗಳು ಭುಗಿಲೆದ್ದ ಭಾವ

ತೆರೆಗಳೆಲ್ಲ ಸರಿದು ಮೌನವಾಗಬೇಕಿದೆ ಮನದ ಶರದಿ
ಭೋರ್ಗರೆವ ಭಾವಗಳಡಗಿ ಶಾಂತವಾಗಲಿ ಮನದಂಬುಧಿ
ಮೌನದಲೆಯಲಿ ತೇಲಿ ಹೋಗಲಿ ಕಹಿನೆನಪ ಕೊಳೆ
ಪ್ರಫುಲ್ಲವಾಗಲೀ ಮನ ಸುರಿದು ಪ್ರೀತಿಯ ಮಳೆ

ಭಾವನಾಲೋಕವಿದು ಸಿಹಿಕಹಿನೆನಪ ಆಗರ
ಹುಣ್ಣಿಮೆ ಚಂದಿರನ ಸೆಳೆತಕ್ಕೆ ಉಕ್ಕಿದಂತೆ ಸಾಗರ
ನಿನ್ನ ನೆನೆದೊಡನದೇಕೋ ನಲಿಯುವುದು ಮನವು
ಸವಿ ನೆನಪ ತೆರೆಯುಕ್ಕಿ ತೇಲಿದಂತಿದೆ ಈ ತನುವು

ಬಯಸುತಿದೆ ಮನ ನೆನಪೆಲ್ಲ ಬಿಸುಟು ಏಕಾಂತಕೆ
ನೋವುಗಳ ಬಂಧನವ ಕಳಚಿ ಹುಡುಕಲಿದೆ ಸ್ವಂತಿಕೆ
ನೆನಪುಗಳ ಸುಳಿಯಲ್ಲಿ ಮುಳುಗಿ ಹೋಗುವ ಭಯ
ಮೌನದಲೇ ಮನವ ಮಥಿಸಿ ನೀಡಬೇಕಿದೆ ಅಭಯ

         ಶೈಲೂ.....

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ