ಕಾಯುತಿದೆ ಸ್ವಗತ

ಕಾಯುತಿದೆ ಸ್ವಗತ
****************

ರಿಗಣಿಸಿದಂತಾಯ್ತು ಬೆಚ್ಚಿ ಎಚ್ಚರಿಸಿ ಎದ್ದೆ
ಹಾಳು, ಯಾರದೋ ಕರೆ ಅವನ ಸುಳಿವಿಲ್ಲ
ಹೆಜ್ಜೆ ಸಪ್ಪಳವಾಯ್ತು ತಟ್ಟನೆದ್ದು ಹೊರಬಂದೆ
ಪೆಚ್ಚುನಗೆ ದಾರಿಹೋಕರದು ಅವನ ಸುಳಿವಿಲ್ಲ

ಪೆಚ್ಚುಮೊರೆಯ ಹಾಕಿ ಕಣ್ಮುಚ್ಚಿ ನಾ ಕುಳಿತೆ
ದುಃಖ ಒತ್ತರಿಸಿ ಬಂದು ಕಣ್ಣು ಕೊಳವಾಯ್ತು
ಬಿಕ್ಕಳಿಸಿ ಅತ್ತದ್ದು ಕೇಳಬಾರದಾರಿಗೆಂದು
ಅಸಂಬದ್ಧ ಮಾತುಕತೆ ಅಲ್ಲೂ ಅವನ್ಹೆಸರಿತ್ತು

ಬಾಗಿಲು ತೆರೆದ ಸದ್ದು ಕಣ್ಣರಳಿಸಿ ನೋಡಿದೆ
ಗಾಳಿ ಸರಿಸಿತ್ತು ಕದವ ಅವನ ಸದ್ದಿಲ್ಲ
ಸಿಟ್ಟೋಸೆಡವೋ ಅರಿಯದೇ ತಟ್ಟನೆದ್ದು ಒಳಬಂದೆ
ಕಣ್ಣು ಕೆಂಪಾಗಿತ್ತು ನನ್ನವನ ಕಾಣದೆ

ಅತ್ತು ಮನ ಸೋತಿತ್ತು ನಿದ್ರೆಯಾವರಿಸಿತ್ತು
ನೇವರಿಸಿತ್ತೊಂದು ಕೈ ಕನಸಿರಬಹುದೇನೋ
ಮುಂಗುರುಳ ನೇವರಿಸಿ ಹೂಮುತ್ತನೊತ್ತಿ
ಕೆನ್ನೆ ಹಿಂಡಿದಂತಾಯ್ತು ಕಣ್ತೆರೆಯಲಿಲ್ಲ

ಕಾಯ್ದು ಸೋತೆಯ ಚಿನ್ನ ಕೋಪವಿಹುದೇ ರನ್ನ
ಬೇಸರವು ಬಹಳೇನು ನಾ ಮಾಡಿದ್ದಾದರೇನೆಂದು
ಜಡೆಯಿಡಿದು ಎಳೆದಾಗ ಕಣ್ಬಿಟ್ಟು ವಾಸ್ತವತೆ ಅರಿತಾಗ
ಪ್ರಿಯಪತಿಯ ತೋಳಿನಲ್ಲಿದ್ದೆ ನಾನಾಗ

          ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು