#ಕವನಸ್ಪರ್ಧೆ#ವಿಷಯ#ಮುಳ್ಳಿನಬೇಲಿ



#ಮುಳ್ಳಿನಬೇಲಿ
************

ಕಂಡ ಕಂಡದ್ದಕ್ಕೆಲ್ಲಾ ದೃಷ್ಟಿ
ಹಾಯಿಸಬಾರದೆಂದು ಹಾಕಿದ್ದೇನೆ
ಕಣ್ಣಿಗೆ ತೆರೆಯ ಮುಳ್ಳಿನ ಬೇಲಿ
ತೀರದ ಬಯಕೆಯ ಮೋಹಕ್ಕೆ
ಬಲಿಯಾಗಬಾರದೆಂದು ಹಾಕಿದ್ದೇನೆ
ಮನಸ್ಸಿಗೆ ಸೌಜನ್ಯದ ಬೇಲಿ

ಅಂತರಂಗದಲ್ಲಿ ಹುಲುಸಾಗಿ
ಬೆಳೆದ ಆಧ್ಯಾತ್ಮಿಕ ಫಸಲಿಗೆ
ಅರಿಷಡ್ವರ್ಗಗಳ ಕಳ್ಳರಕಾಟ
ಆಕರ್ಷಣೆಯ ಮೃಗಗಳ ಹಾವಳಿಗೆ
ತುತ್ತಾಗಬಾರದೆಂಬಾಸೆಯಲಿ ಹಾಕಿದೆ
ಸುಭದ್ರವಾದ ದೃಢಮನದ ಬೇಲಿ

ಸುಂದರ ಸಂಸಾರದೊಳಿತಿಗೆ
ಆಶಾ ಪಾಶ ಮೋಹಗಳಿಗೆ ಸಿಲುಕಿ
ದೃಢ ಸಂಬಂಧಗಳಲಿ ಬಿರುಕಾಗದಂತೆ
ಅನುಬಂಧವ ಹೊಸೆದು ಬೆಸೆದು
ನಿಷ್ಕಾಮ ಪ್ರಶಾಂತ ಮನಸಿನಲ್ಲಿ
ಹಾಕಿದ್ದೇನೆ ಪ್ರಾಮಾಣಿಕತೆಯ ಬೇಲಿ

ಚಿತ್ತಚಂಚಲ ಮನವ ಹಿಮ್ಮೆಟ್ಟಿಸಲು
ಇಂದ್ರಿಯಗಳನ್ನೆಲ್ಲ ಅಂಕೆಯಲ್ಲಿಡಲು
ದುಷ್ಕೃತ್ಯಗಳ ಬದಿಗೊತ್ತಿ ಉತ್ಕೃಷ್ಟವಾಗಲು
ಜಾತಿವೈಷಮ್ಯಗಳ ದಳ್ಳುರಿಗೆ ಬಲಿಯಾಗದಿರಲು
ಭಾವೈಕ್ಯತೆಯಲಿ ಎಲ್ಲರೊಂದುಗೂಡಲು
ಹಾಕಿದೆ ವಿವೇಕದ, ಆದರ್ಶದ, ಸುಜ್ಞಾನದ ಆತ್ಮಬಲದ ಬೇಲಿ

            ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು