ಹಾಡು ಹಕ್ಕಿಗೆ ಬೇಕೇ ತಾಳ ಜ್ಞಾನ.?


ಹಾಡು ಹಕ್ಕಿಗೆ ಬೇಕೇ ತಾಳ ಜ್ಞಾನ.?

ಪ್ರಕೃತಿಯ ವಿಸ್ಮಯಕೆ ಪದಗಳ ಹಂಗೇಕೆ?
ಕುಣಿವ ನವಿಲಿಗೆ ನಾಟ್ಯ ಕಲಿಸಬೇಕೆ?
ಸುಶ್ರಾವ್ಯ ಗಾಯನವು ಕೂಜನಕೆ ವರವು
ಇಟ್ಟವರಾರದಕೆ ಸುಮಧುರ ಸ್ವರವು..!

ಹರಿವ ನೀರ ಜುಳು ಮಂಜುಳ ಸ್ವರವು
ಸುಯ್ಯೆಂದು ಬೀಸುವ ಗಾಳಿಯ ರವವು
ಬಾನಾಡಿ ಹಾಡುವ ಚಿಲಿಪಿಲಿ ಗಾನ
ಆ ದೇವನಿತ್ತ ಕರುಣೆ ಅವಕೆ ಸನ್ಮಾನ.!

ಮುದ್ದು ಗಿಳಿಮರಿಯು ಉಲಿವ ಸವಿಮಾತು
ಜಲಕ್ಷೀರ ನ್ಯಾಯವ ಹಂಸ ಕಲಿತೆಲ್ಲಿ ಬಂತು
ನೀರಲ್ಲಿ ಈಜುವ ಮೀನಿಗೆ ತರಬೇತಿ ಬೇಕೇ?
ದುಂಬಿಗೆ ಝೇಂಕಾರವ ಕಲಿಸಿಕೊಡಬೇಕೆ?

ಹಾಡು ಹಕ್ಕಿಗೆ ಬೇಕೇಕೆ ತಾಳ ಜ್ಞಾನ?
ಲೋಕವೇ ನಾದದಾಲಾಪದಲಿ ಲೀನ.!
ಸೃಷ್ಟಿಯ ಮಹಿಮೆ ಇದು ಸುಂದರ
ಯಾರೂ ಬಿಡಿಸಲಾಗದ ಒಗಟಿನ ಹಂದರ

              ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು