59.ಹೊಂಗನಸು



ಚಂಚಲ ಮನದಲೂ ನಿನದೇ ಹೊಂಗನಸು

ಮನವದೇಕೋ ಮರ್ಕಟನಂತಿದೆ
ನಿಂತಲ್ಲಿ ಸ್ಥಿರವಾಗಿ  ನಿಲ್ಲಲಾರದೆ
ನಿನ್ನೊಡನಾಟದ ಸವಿಯದೇ ಕನಸು
ಅಲ್ಲೂ ಏಕೋ ಒಮ್ಮೊಮ್ಮೆ ಮುನಿಸು
ಚಂಚಲ ಮನದಲೂ ನಿನದೇ ಹೊಂಗನಸು

ಅದಾವ ಚೆಲುವ ಮೋಹನರಾಗ
ಉಲಿದು ಸೆಳೆದೆ ನನ್ನೀ ಮನವ
ಎಳೆದೆಳೆದು ನಿಲಿಸಲೆತ್ನಿಸಿದರೂ
ಹಿಡಿತಕೆ ಸಿಗದೇ ಜಾರುತಿಹುದು
ಚಂಚಲ ಮನದಲೂ ನಿನದೇ ಹೊಂಗನಸು

ತೂಗುತಿದೆ ಮನ ಅತ್ತಲಿಂದಿತ್ತ
ಇತ್ತಲಿಂದತ್ತ ಉಯ್ಯಾಲೆಯ ತೆರದಿ
ಜೊತೆಗಿರಿಸಿದ ಹೆಜ್ಜೆಯ ನೆನಪು
ಬೇಡವೆಂದರೂ ಕಾಡುವ ಕನಸು
ಚಂಚಲ ಮನದಲೂ ನಿನದೇ ಹೊಂಗನಸು

ಕಿವಿಯಲುಸುರಿದ ಆ ಸವಿಗಾನ
ಗರಿಬಿಚ್ಚಿ ಕುಣಿದ ಬಯಕೆಯ ತನನ
ಎಲ್ಲಿಂದಲೋ ಬಂದು ಕಾಡಿದ ಕೋಪ
ಹಮ್ಮಿನಲಿ ಮುರಿದ ಮಾತಿನ ಪ್ರತಾಪ
ಆದರೂ ಮನದಲಿ ನಿನದೇ ಕನಸು

ಸಾಕಿನ್ನು ಈ ಪರಿ ಪ್ರಲಾಪದ ತಾಪ
ಬಳಿ ಬಾ ಒಲವೇ ನೀಗಿಸು ಕೋಪ
ಮರೆವೆನೆಂದರೂ ಮರೆಯಲಾಗದು
ನೀನಿಲ್ಲದೆ ಬಾಳ ದೋಣಿ ಸಾಗದು
ತಣಿಸಿ ಮನವ ಮೂಡಿಸು ಬಾ ಹೊಂಗನಸು

           ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು