137. ಕವನ
*****
ಮನದ ಮೂಲೆಯಲೊಂದು
ಬಚ್ಚಿಟ್ಟ ಬಾವನೆಗಳ ಮೂಟೆ
ತೊಡಿಸಿ ಚಂದದ ಭಾವ
ಹರಿಯುತಿದೆ ರಸಧಾರೆ
ಗುನುಗುತಿರುವ ಮನಕೆ
ಚಂದದ ಶಬ್ದ ಗಳ ಚರಣ
ಪ್ರೀತಿಯಲಿ ಪೋಣಿಸಿದ
ಪದಗಳ ಚಂದದಾಭರಣ
ಸಾಲು ಸಾಲುಗಳಲ್ಲೂ ನಿಂತು
ಚೆಲ್ಲಿದೆ ಹೊಳಪಿನ ಬೆಳಕು
ನೂರಾರು ಅರ್ಥಗಳಿವೆ
ಮಧುರ ನೆನಪಿನ ಮೆಲುಕು
ಉದಯಿಸುತಿಹುದು ಮತ್ತೆ
ಆಸೆಯಾ ಹೊಸಭಾವ
ಬಿತ್ತರಿಸಿ ದಿನದಿನವೂ
ಅವತರಿಸಿ ನವಪಲ್ಲವ
ಅಂದದ ಪದಪುಂಜ
ಸಾಲು ಸಾಲಲಿ ಮೇಳೈಸಿ
ಕವನ ಸೂಸಿದೆ ಪ್ರಭೆಯ
ಪಲ್ಲವಿ ಚರಣಗಳ ಹರಸಿ
ನೂರಾರು ಬಣ್ಣಗಳ
ಕನಸುಗಳ ಕವನ
ಎದೆಯ ಬಾಂದಳದಲ್ಲಿ
ಕಟ್ಟಿದೆ ಭವ್ಯ ಭವನ
ಶೈಲೂ......
Comments
Post a Comment