ನಂಬಿದೆ ನಿನ್ನಯ ಪಾದವ


ನಂಬಿದೇ ನಿನ್ನಯ ಪಾದವ
**********************

ನಂಬಿದೇ ನಿನ್ನಯ ಪಾದವ ಪಾರ್ವತೀ ರಮಣ || ನಂಬಿದೆ||
ನಂಬಿದೆ ನಿನ್ನ ಪಾದ ಭಾವಬಂಧನ ಹರಿಸೋ
ಕಾಶಿಯ ವಿಶ್ವನಾಥ ಭಕ್ತರ ಪೊರೆ ಜಗನ್ನಾಥ || ನಂಬಿದೆ||

ಮೂರು ಕಣ್ಣಿನ ಹರನೆ
ಚಂದ್ರನ ಹೊತ್ತವನೆ
ನಂಜು ನುಂಗಿದ ಶಿವ ನಂಜುಂಡೇಶನೇ |
ಪಾವನ ಗಂಗೆಯ
ಜಟೆಯಲ್ಲಿ ಧರಿಸಿಹ
ಜಟಾಜೂಟ ಹರ ಗಂಗಾಧರನೇ ||ನಂಬಿದೆ ||

ಕರದಲ್ಲಿ.ತ್ರಿಶೂಲ
ಕೊರಳಲ್ಲಿ ರುದ್ರಾಕ್ಷ
ಧರಿಸಿಹೆ ನಡುವಲ್ಲಿ ಗಜಚರ್ಮಾoಬರ |
ನೊಸಲಲ್ಲಿ ಹೊಳೆಯುವ
ಭಸ್ಮ ವಿಲೇಪನ
ಸರ್ಪ ಮುಕುಟ ನಾಗಾಭರಣನೇ || ನಂಬಿದೇ ||

             ಶೈಲೂ......

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ