43.ವಸಂತನಾಗಮನ

ವಸಂತನಾಗಮನ

ವಸಂತನಾಗಮನದಿ ಮಾಮರವು ಚಿಗುರಿರಲು
ಬೇವಿನ ಚಿಗುರೊಡನೆ ಸಿಹಿ ಬೆರೆಯಿತು..!!
ತಳಿರು ತೋರಣದ ಒಸಗೆ ಕೈಬೀಸಿ ಕರೆದಿರಲು
ಹೊಸ ವರುಷ ಹರುಷದಲಿ ತಾ ನಲಿಯಿತು..!!

ಮಾಮರದ ಚಿಗುರೆಲೆಯ ಸವಿಯು ತಾನುಂಡು
ಕೋಕಿಲದ  ಕುಹೂ ದನಿಯು ತಾ ಮೆರೆಯಿತು..!!
ಹೊಂಗೆಯ ತೊಂಗಲಲ್ಲಿ ಘಮ್ಮೆನ್ನೋ ಸುಮರಾಶಿ
ಮಧುಹೀರಿ ಭೃಂಗವು ತಾ ಝೇಂಕರಿಸಿತು..!!

ಹಣ್ಣೆಲೆಯ ತಾವಿನಲಿ ನವ ಚಿಗುರು ಪಲ್ಲವಿಸಿ
ವಸಂತೋತ್ಸವದ ಋತುಗಾನ ಮೇಳೈಸಿತು..!!
ಭೂರಮೆಯ ಚೆಲುವಿಗೆ ಸ್ವರ್ಗವೇ ಮನಸೋತು
ನವ ಯುಗಾದಿಯ ಗಾದಿಯಲಿ ಮೈಮರೆಯಿತು..!!

ಹೊಸತು ಜನ್ಮದ ಹರುಷದಲಿ ಪ್ರಕೃತಿಯು ನಲಿದಿರಲು
ಎಲ್ಲೆಲ್ಲೂ ಸಂಭ್ರಮದ ಉತ್ಸಾಹದುಲ್ಲಾಸ ಮೈದಳೆಯಿತು..!!
ಬೆವುಬೆಲ್ಲದ ಸಹಿತ ಸಿಹಿ ಹೋಳಿಗೆಯ ರುಚಿಯಲ್ಲಿ
ಜನಮನದ ಸಂತಸವು ನೂರ್ಮಡಿಸಿತು..!!!

              ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು