216 ಗಜಲ್


ಗಝಲ್
*******

ಕಾಯುವುದು ಹೊಸತೇನಲ್ಲ ನನಗೆ ಬಿಡು ಕೃಷ್ಣಾ
ನೆನೆಯುತ್ತ ನೋಯುವುದು ಹಳತೇನಲ್ಲ ಬಿಡು ಕೃಷ್ಣ

ಯಮುನಾ ತೀರದಲಿ ಕುಳಿತು ಕನವರಿಸುತ್ತಾ ಕಣ್ಣೆವೆಯ 
ಮುಚ್ಚದೇ ಹಂಬಲಿಸುವುದು ಹೊಸತೇನಲ್ಲ ಬಿಡು ಕೃಷ್ಣಾ

ಕೊಳಲೂದುತ ಕರೆಯಲು ಬಳಿಗೆ
ಬಾರದೇ ಇರುವೆನೇನು ಸಖಾ
ನೀ ಕಾಡಿ ಕಾಡಿಸಿ ಬಳಲಿಸುವುದು ಹೊಸತೇನಲ್ಲ ಬಿಡು ಕೃಷ್ಣಾ

ಭೂಜಾತೆಯಂತೆ ಸಹನೆಯಲಿ ನಿಂತಿರುವೆನು
 ಸುರಿವ ಪ್ರೀತಿ ಮಳೆಯಲಿ ನೆನೆಯುವುದು ಹೊಸತೇನಲ್ಲ ಬಿಡು ಕೃಷ್ಣಾ

ಶೈಲೂ ಬಯಸಿರುವ ಜಗದೊಡೆಯ ನೀನು
ನಿನ್ನಲ್ಲೇ ಮನನೆಟ್ಟಿರುವುದು ಹೊಸತೇನಲ್ಲ ಬಿಡು ಕೃಷ್ಣಾ...

        ಶೈಲೂ....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು