98. ನೀ ರಾಧೇ ಎಂದಾಕ್ಷಣವೇ

ನೀ ರಾಧೇ ಎಂದಾಕ್ಷಣವೇ
ನಿನ್ನ ಮನದ ಒಳಹೊಕ್ಕು
ಪವಡಿಸಿದೆ ಮಾಧವಾ...
ಮೋಹನ ರಾಗವ
ನೀನುಡಿಸುವಾಗ ..ಆ..ರಾಗದ 
ಜೊತೆ ಜೊತೆಗೆ ನಾ ಗುನುಗಿದೆ ಮಾಧವಾ..

ನೀ ತಂದ ಪಾರಿಜಾತದ
ಸೌಗಂಧದೊಳಗೇ
ನಾ ಬೆರೆತುಹೋದೆ ಮಾಧವಾ...
ನೀ ಹೆಣೆದ 
ಪ್ರೀತಿ ಬಲೆಯಲ್ಲಿ ನಾ 
ಮೀನಾಗಿ ನಲಿದೆ ಮಾಧವಾ..

ಸದಾ ನಿನ್ನದೇ ಸ್ಮರಣೆ
ಪ್ರತಿಕ್ಷಣ ನಿನ್ನ ತಪನೆ
ಉಸಿರಲೂ ನಿನ್ನ ಹೆಸರಿದೆ ಮಾಧವಾ..
ನೀ ನುಡಿಸುವ.. ಆ..
ವೇಣು ವಾದನದಲ್ಲಿ
ನನ್ನದೇ ದನಿ ಬೆರೆತಿದೆ ಮಾಧವಾ..

ನಿನ್ನ ಕಾಲ್ಗೆಜ್ಜೆಯುಲಿತದ
ಘಲಿರು ನಾದದಲಿ
ನಾ ಕಳೆದುಹೋದೆ ಮಾಧವಾ..
ನೀನೇ ಸೃಜಿಸಿದ ಮೋಹದ
ಮಾಯಾಜಾಲದಲಿ
ನಾ ಬಂಧಿಯಾದೆ ಮಾಧವಾ..

ನುಡಿಸು ಮಧುರ
ಮೋಹನರಾಗ ಆಸ್ಥೆಯಲಿ
ನಾ ಕೊಳಲಾಗುವೇ ಮಾಧವಾ..
ನನ್ನದೇನಿಲ್ಲ ಬಿಡು
ಮಾಯಗಾರ ಗೊಲ್ಲ ನೀನು
ನಿನ್ನೊಳು ಲೀನವಾದೆ ಮಾಧವಾ...

           ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು