84. ಕಾಡದಿರು ನೆನೆಪೇ
ಕಾಡದಿರು ನೆನೆಪೇ ನೀ ಭಾವನೆಗಳ ಮೀಟಿ
ಕಾಡದಿರು ನೀ.. ಓ ಮಧುರ ನೆನಪೇ ಮೌನಗಳ ದಾಟಿ ||
ಸುಂದರ ಸ್ನೇಹದ ಮದುರ ಗಾನ
ಜಗವನೆ ಮರೆಸಿದ ರಮ್ಯ ವಚನ
ಮೂಡಿತು ಎನ್ನಲಿ ಸುಮಧುರ ಕವನ
ಹೇಗೆ ಮರೆಯಲಿ ಹೇಳು ನಿನ್ನಂದದ ವದನ ||
ನೀನೆಲ್ಲಿದ್ದರೇನು ನಿನ್ನಲೇ ಮನಸು
ನೀನುಲಿವಾ ನುಡಿ ತಂದಿತ್ತು ಕನಸು
ಪ್ರೀತಿಯಿರುವೆಡೆಯೇ ಇರುವುದು ಮುನಿಸು
ಅರಿಯಲೇಕೋ ಸಖ ನೀ ನನ್ನ ಮನಸು ||
ಸಾಗರಕೆ ಬೆರೆತ ನದಿಯ ತೆರದಿ
ಮನವು ನಿನ್ನಲೇ ಬೆರೆತು ದಾಟಿತು ಪರಿಧಿ
ನಾನು ಬೇರೆಂಬ ಭಾವ ಮರೆಸಿ
ಸೇರಿತು ನಿನ್ನಲೇ ಸ್ನೇಹವ ಬೆರೆಸಿ ||
ಶೈಲೂ......
Comments
Post a Comment