66.ಜೀವನ ಪಯಣ

ಜೀವನ ಪಯಣ
*************

ತಾಯಿ ಗರ್ಭದಿಂದ ಬಂದಾಕ್ಷಣ
ಶುರುವಾಯ್ತು ಜೀವನ ಪಯಣ
ಅಂಬೆಗಾಲಿಟ್ಟು ನಗುವ ಹಾಲ್ಗೆನ್ನೆ ಕಂದ
ನಡಿಗೆ, ಮಾತು,ಕಲಿಕೆ,ಶುರು ಬಾಲ್ಯದಿಂದ

ಓದು ಬರಹ ಕಲಿತು ಮುಗಿಯಿತು ಬಾಲ್ಯ
ಜೀವನೋತ್ಸಾಹ ತುಂಬಿತು ಯೌವನ
ಕಲಿತು ಬೆಳೆಯಲೊಂದು ಶ್ರೇಷ್ಠ ವಿಧ್ಯೆ
ಬದುಕು ಸಾಗಿಸಲೊಂದು ನೌಕರಿ

ಆಕರ್ಷಿತ್ತು ಮನ ಪ್ರೀತಿ ಪ್ರೇಮದೆಡೆಗೆ
ಮನೆ, ಮಡದಿ ಸಂಸಾರದ ಕರೆಗೆ
ಮುದವಿತ್ತು ಕಳೆಸಿತ್ತು ಕಂದಮ್ಮನ ನಲ್ನುಡಿ
ಜೊತೆಗೆ ಸಾಕಿ ಸಲಹುವ ಜವಾಬ್ದಾರಿ

ಜೀವನದ ಏಳುಬೀಳುಗಳ ನಡೆಗೆ
ಮುಪ್ಪಾವರಿಸಿತ್ತು ಸವೆದ ದೇಹಕೆ
ತಪ್ಪು ಒಪ್ಪುಗಳ ನೆನೆದು ಮನವಾಗಿತ್ತು ಭಾರ
ತಪನೆ ಪರಿತಪನೆ ಕಾಲಯಾಪನೆ ದುಸ್ತರ

ತಾಯಗರ್ಭದಿಂದಿಳಿದು ನಲಿದು 
ನಲುಗಿ ಭೂಗರ್ಭ ಸೇರುವವರೆಗೂ
ನಿಲ್ಲದು ಈ.ಜೀವನ ಪಯಣ
ನೋವು ನಲಿವು ದುಃಖ ನಿರಾಶೆಗಳ ಯಾನ

         ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು