ನನ್ನಲಿ ನಾ ಕಂಡೆ ನಿನ್ನನ್ನೇ31

ನನ್ನಲಿ ನಾ ಕಂಡೆ ನಿನ್ನನ್ನೇ
********************

ಮನದ ಹೊತ್ತಿಗೆಯ ಪುಟಪುಟದಲೂ
ಬರೆದೆ ಹೇ ಕೃಷ್ಣ ನಿನ್ನದೇ ನಾಮ
ಉಸಿರುಸಿರ ಏರಿಳಿತದಲೂ ಕಂಡೆ
ಮದನಾಂತಕ ನಿನ್ನಿರುವ ಧಾಮ

ಬಾನಂಚಲಿ ತೇಲುವ ಕರಿಮುಗಿಲಲಿ
ಕಂಡೆ ಕೃಷ್ಣ ನಿನ್ನ ವದನದ ಚೆಲುವು
ನೀಲ ಮೇಘಗಳ ಸಂಘರ್ಷದಲಿ
ಕಂಡೆ ನಿನ್ನ ಕಣ್ಣ ಕಾಂತಿಯ ನಿಲುವು

ಎಳೆ ಬಿದಿರಿನ ಮೆಳೆಯಲಿ ಕಂಡೆ
ಮುರಳೀಧರ ನಿನ್ನ ಕೊಳಲಗಾನ
ನಲಿದು ನರ್ತಿಸುವ ನವಿಲಲಿ ಕಂಡೆ
ನಿನ್ನ ಹೆಜ್ಜೆಯುಲಿತದ ತೋಂತನನ

ಕ್ಷಣಕ್ಷಣದಲೂ ನಿನದೇ ನೆನಪಿರಲು
ನಾನೆಂಬುದಿನ್ನೆಲ್ಲಿ? ಎಲ್ಲೆಡೆಯು ನೀನೇ
ತನುಮನವೆಲ್ಲ ನಿನ್ನಲೇ ಬೆಸಗೊಂಡಿರಲು
ಹೇ ಕೃಷ್ಣ ನನ್ನಲಿ ನಾ ಕಂಡೆ ನಿನ್ನನ್ನೇ

ರಾಧೆಯೊಳು ಕೃಷ್ಣನೋ ಕೃಷ್ಣನಲಿ ರಾಧೆಯೋ
ಬೆರೆತುಹೋಗಿದೆ ರಾಧಾಂತರಂಗ
ಇಣುಕಿದೆಡೆಯೆಲ್ಲ ಅವನ ರೂಪವೇ
ಆವರಿಸಿಬಿಟ್ಟಿರುವ ಅಂತರಂಗ ಬಹಿರಂಗ

            ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು