252 ಅನುಬಂಧ
ಜನುಮ ಜನುಮದ ಅನುಬಂಧ
*************************
ಸುತ್ತಲೂ ಕತ್ತಲೆಯು ಮುಸುಕಿರಲು
ಭಯದಿಂದ ನಾ ನಡುಗುತ್ತಿರಲು
ಪ್ರಣತಿ ಹಿಡಿದು ಬೆಳಕಾಗಿ ಬಂದೆ
ಸರಿಸಿ ಭಯವ ನಗು ಮೂಡಿಸಲೆಂದೇ
ಕಾರ್ಮೋಡ ಕವಿದ ಬಾನಿನಂತೆ
ಮುಸುಕಿ ಮನದಿ ನೂರಾರು ಚಿಂತೆ
ಏನೋ ಕಳೆದಂತೆ ತಳಮಳ ಮೊಗದೆ
ಹರಿಸಿ ನವಿರಾದ ನಗುವನ್ನು ತಂದೆ
ಸೂರ್ಯನುದಯಕೆ ಕಮಲವರಳಿದಂತೆ
ಹೂವಲ್ಲಿ ಬೆರೆತ ಮಕರಂದದಂತೆ
ಬೀಸೋ ತಂಗಾಳಿಯಲಿ ಸೌಗಂದ ಬೆರೆತಂತೆ
ನಿನ್ನಲ್ಲಿ ನಾ ಬೆರೆತೆ ಹಾಲು ಜೇನಂತೆ
ಅದೆಂಥ ಅನುಬಂಧ ನಮ್ಮಿಬ್ಬರ ನಡುವೆ
ಹೃದಯ ಹೃದಯಕೆ ಪ್ರೀತಿಯ ಸೇತುವೆ
ಬಾಂಧವ್ಯವಿದು ಬಿಡಿಸಲಾರದ ಬೆಸುಗೆ
ನಿನ್ನೊಡನಾಟ ತಂತು ಮೊಗದಲ್ಲಿ ಹೂನಗೆ
ಇರಲಿ ಹೀಗೆಯೇ ಬಂಧ ಕೊನೆಯವರೆಗೆ
ಅನುಬಂಧ ತಂದ ಒಲವಿನ ಒಸಗೆ
ಜನುಮಜನುಮದಲೂ ನಿನ್ನ ನೆರಳಾಗಿ ಬರುವೆ
ನಿನ್ನೊಡನಾಟದಲಿ ನಲ್ಲ ಸುಖ ಕಾಣುವೆ
ಬಾಳ ಬಂಡಿಯ ಚಲನೆಗೆ ನೀ ಸೂತ್ರಧಾರಿ
ನೀನೇಣಿಸಿದಂತೆಯೇ ನಡೆವ ನಾ ಪಾತ್ರಧಾರಿ
ನನ್ನ ಪ್ರತಿ ಚಲನೆಗೂ ಇಹುದು ನಿನ್ನದೇ ಪಾತ್ರ
ನನ್ನ ನಗುವಿಗೆ ಕಾರಣವೇ ನಿನ್ನಂದದ ಚಿತ್ರ
ಶೈಲೂ......
Comments
Post a Comment