251ಬೆಳಕು
ಬೆಳಕು
******
ಅಜ್ಞಾನದ ತಮವ ಓಡಿಸಲು ಕಾದಿದೆ
ಬಾಗಿಲ ಬಳಿಯಲ್ಲಿ ನಿಂದು ಹೊಂಬೆಳಕು
ತೆರೆದು ಮನದ ಕದವ ಬರಮಾಡಿಕೊ ಬೇಗ
ತೊಳೆಯಲೀ ಅಹಮಿಕೆಯ ಬೆಳಗಿ ನಲ್ಬೆಳಕು
ಹಗಲಿಗಿಹುದು ದಿನಕರನ ಪ್ರಖರ ಬೆಳಕು
ಇರುಳಿಗಿದೆ ನಗುವ ತಿಂಗಳನ ತಣ್ಬೆಳಕು
ಮನವ ಬೆಳಗಲಿಹುದು ಜ್ಞಾನದ ಬೆಳಕು
ಅಂತರಂಗದ ಚೆಲುವಿಗೆ ನಗುವೆ ಬೆಳಕು
ಮನದ ಜಡ ತೊಲಗೆ ಉತ್ಸಾಹದ ಬೆಳಕು
ದ್ವೇಷಾಸೂಯೆಯ ತಮಕೇ ಪ್ರೀತಿ ಬೆಳಕು
ಅಜ್ಞಾನ ಓಡಿಸಲು ಅರಿವೆಂಬ ಬೆಳಕು
ಪ್ರಜ್ವಲಿಸಲೇಲ್ಲೆಲ್ಲೂ ಮಾನವತೆಯ ಬೆಳಕು
ಮನಮುದುಡಿ ಕುಳಿತಿರಳು ಆಶೆಯ ಬೆಳಕು
ನೊಂದ ಜೀವಗಳಿಗೆ ಕರುಣೆಯ ಬೆಳಕು
ವರ್ಣಬೇಧದ ದಳ್ಳುರಿಗೆ ಸ್ನೇಹದ ಬೆಳಕು
ಮನುಕುಲವುಳಿಯಲು ಶಾಂತಿಯಾ ಬೆಳಕು
ಮೌಢ್ಯತೆಯ ಬದಿಗಿರಿಸಿ ಹಚ್ಚೋಣ ಹಣತೆ
ಬೆಳಗಲೆಲ್ಲರ ಬಾಳು ನಿಸ್ವಾರ್ಥದ ಪ್ರಣತೆ
ಸುತ್ತಲೂ ಪಸರಿಸಿ ಜ್ಞಾನಜ್ಯೋತಿಯ ಬೆಳಕು
ಮನದಂಗಳದಿ ಪ್ರಜ್ವಲಿಸಲಿ ಕಿರುನಗೆಯ ಬೆಳಕು
ಶೈಲೂ.....
Comments
Post a Comment