ನೆನಪು243

ನೆನಪು
*****

ನೆನಪೆಂದರೆ ...ವಾಸ್ತವದಿಂದಾಚೆ
ಎಂದೋ ನಡೆದ ಕನವರಿಕೆಯ
ಹೊಂಗಿರಣದ ಅರುಣೋದಯ
ಜಡ ಮನಕೆ ಮುದವೀವ
ಸುಂದರ ಸೂರ್ಯೋದಯ...

ನೆನಪೆಂದರೆ ...ಮರೆಯಲಾಗದ
ಮನದ ಭಾವಾಂತರಂಗದ ಬಯಕೆ
ಬಿದಿಗೆ  ಚಂದ್ರಮನ ನೆಳಲು
ದಣಿದ ಮನಕೆ ತಂಪೆರೆಯುವ
ಚಂದದ.ಚಂದ್ರೋದಯ...

ನೆನಪೆಂದರೆ... ನೀಲಾಗಸದಿ ಹೊಳೆವ
ಚಂದದ ಬಣ್ಣ ಬಣ್ಣದ ಚುಕ್ಕಿ
ಮಿಂಚಿ ಹೊಳಪಿಸುವ ತಾರೆ
ಚಿಂತೆಗಳ ಮರೆಸಿ ನಗುವುಕ್ಕಿಸಿ
ಭಾವ ಬಾಂದಳದಲ್ಲಿ ಹಾರುವ ಹಕ್ಕಿ...

ನೆನಪೆಂದರೆ... ಮನದ ತೆರೆ
ಭೋರ್ಗರೆವ ಸಾಗರದಿ ಅಲೆಅಲೆಯಾಗಿ
ಬಂದು ದಡಕ್ಕಪ್ಪಳಿಸುವ ತೆರೆ
ಮನದೊಳಗಿಂದ ತೇಲಿ ತೇಲಿ
ಬಂದ ನಲ್ಮೆಯ ಪ್ರೀತಿ...

ನೆನಪೆಂದರೆ... ಮೃಧು ಮಧುರ
ದುಂಬಿಗಳ ಝೇಂಕಾರ
ಎದೆಯಲುಕ್ಕಿದ ಪ್ರೇಮ ಮಹಾಪೂರ
ಒಮ್ಮೊಮ್ಮೆ ನೋವಿನ ಭಂಡಾರ
ಕಠಿಣತೆಯ  ಸಾಕಾರ...

ನೆನಪೆಂದರೆ... ನಿನ್ನ ಚಿತ್ತಾರ
ಬೇರಿನ್ನೇನಿದೆ ನಿನ್ನ ಹೊರತು
ಮನದಲ್ಲಿ ನಿಂತ ಆಕಾರ
ಪ್ರೀತಿಯ ಮಹಾಪೂರ
ನನ್ನೊಲುಮೆಯ ಚಿತ್ತಚೋರ
ಚಂದದ ಬಾಳ್ವೆಗೆ ನೀನೇ ಹರಿಕಾರ....

           ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು