236ಗುಬ್ಬಚ್ಚಿ ಕಲರವ


#ಗುಬ್ಬಚ್ಚಿ_ಕಲರವ

ಚಿವ್ ಚಿವ್ ಎನ್ನುತ ಹಾರುವ ಗುಬ್ಬಿ
ನೋಡುವೆ ಏಕೇ ಅತ್ತಿತ್ತ
ಕೊರಳನು ಕೊಂಕಿಸಿ ನೋಡುವೆ ಏನು
ಕಾಳನು ಹಾಕುವೆ ಬಾ ಇತ್ತ

ಬೆಳಗಿನ ವೇಳೆಯ ಚಿಲಿಪಿಲಿ ಕಲರವ
ಕೇಳಲು ಮನಕೇನೋ ಆನಂದ
ಎಳೆಬಿಸಿಲಲಿ ನೀನು ಕಾಳನು ಹೆಕ್ಕುತ
ಬೆರಗಲಿ ನೋಡಲು ಬಲು ಚಂದ

ಟೊಂಗೆಯ ತೊಗಟೆಯಲವಿತಿಹ ಹುಳು
ಅದು ನಿನ್ನಯ ಪ್ರೀತಿಯ ಆಹಾರ
ಕೊಕ್ಕಲಿ ಕುಕ್ಕಿ ಹಿಡಿದೆಳೆಡೆತ್ತಿ ತಂದು
ಗುಟುಕಿತ್ತರೆ ಮರಿಗದು ಆಧಾರ

ಹುಲ್ಲು, ಕಡ್ಡಿಯ ಕೊಕ್ಕಲಿ ಹೆಕ್ಕುತ ತಂದು
ಮನೆಮಾಡಲಿ ಕಟ್ಟುವೆ ಗೂಡು
ತತ್ತಿಯನಿಟ್ಟು ಪ್ರೀತಿಯ ರಕ್ಷಣೆ ಕೊಟ್ಟು
ಮರಿಗೆ ಮಾಡುವೆ ತಾ ಮುದ್ದು

ಅಂದ ಚಂದದ ಗುಬ್ಬಿಯ ಮರಿಯೇ
ನೀನಿಲ್ಲದೇ ಇಂದು ಭಣಭಣ
ನಿನ್ನಯ ಕಲರವ ಮರೆಯಾಯ್ತೆಂದೋ
ನಾಳಿನ ಜನತೆಗೆ ನೀನೊಂದು ಚಿತ್ರಣ

            ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು