222 ಬಂದೆಯಾ ಗೋಪಾಲ

ಬಂದೆಯಾ  ಗೋಪಾಲ
********************

ಬಂದೆಯಾ  ಗೋಪಾಲ
ಶ್ರೀ ಮುರಳೀ ಲೋಲ
ಭವಬಂಧನವ ಬಿಡಿಸು
ಹರಸು ನರಹರಿಯೇ

ಭಾರವಾಗಿದೆ ಜೀವ
ಭರಿಸಿ ನೂರಾರು ನೋವ
ಗೋಪಾಲ ನೆ ಕಾವ
ಹರಿಸಿ ಜಂಜಡವಾ

ಮನದ ಮೂರುತಿ ನೀನು 
ಆಹ್ವಾನ ಬೇಕೇನು??
ಜೀವನವು ಸಾಕಿನ್ನು
ನೀಡು ಭರವಸೆಯನ್ನು

ಜೀವನದ ಯಾತ್ರೆಯಲಿ
ಸಂಗಡಿಗರು ಹಲವಾರು
ಕುಜನರಾ ಸಂಘದಲ್ಲಿ
ದುರಿತಗಳು ನೂರಾರು

ಸಾಕಾಗಿದೆ  ಬದುಕು
ನೆಮ್ಮದಿಯ ಹುಡುಕುತಲಿ
ಮರೆತೇನೇನೋ ನಿನ್ನ
ಮರೆಯದಿರು ನೀ ನನ್ನ

ನಗುಮೊಗದ ಗೋವಿಂದ
ನಿನ್ನ ಮಾತೇ ಚಂದ
ಬಿಡಿಸುತಲಿ ಭವ ಬಂಧ
ನೀಡೆನಗೆ  ಆನಂದ

ಬೃಂದಾವನದೊಳಗಿಂದ
ಆಡುತಲಿ ನಲಿವಿಂದ
ತೋರಿ ಮುಖಾರವಿಂದ
ಪಾರುಗಾಣಿಸೋ ಕಂದ

           ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು