220 ಕರಬಂಧ

ಕರಬಂಧ
*********

ಭಯ ಬೇಡ ಬಿಡು
ಬಿಡಲಾರೆ ಎಂದೆಂದಿಗೂ
ಕೈಹಿಡಿದು ನಡೆಸುವೆ
ಜೊತೆಯಿರುವೆ ಪ್ರತಿ ಹೆಜ್ಜೆಗೂ

ಕರದಲ್ಲಿ ಕರವಿರಿಸಿ
ಮುಖದಲ್ಲಿ ನಗುವಿರಿಸಿ
ಚಿಂತೆಯ ಒಂದೆಳೆಯೂ
ಸೋಕದಂತೆ ಕಾಯುವೆ

ಏತರ ಭಯ ಬಿಡು ಬೇಸರ
ಮನದ ದುಗುಡ ಬಿಸುಟು ದೂರ
ಬಿಗಿ ಹಿಡಿತವಿದೆಯಲ್ಲ, ಇದು
ಸಡಲಿಸಲಾರದ ಸಂಬಂಧ

ಇರಲಿ ಸದಾ ಆತ್ಮವಿಶ್ವಾಸ
ನಿನ್ನೊಂದಿಗೇ ಕೊನೆಯ ಶ್ವಾಸ
ಇಂದಷ್ಟೇ ಅಲ್ಲ , ಮುಂದೆಂದೆಂದೂ
ಬಿಡಿಸಲಾರದಂತ.ಬಂಧವಿದು

ಈ ಒಲುಮೆಯ ಕರಬಂಧ
ಜನ್ಮಾಂತರದ ಸಂಬಂಧ
ಎಲ್ಲ ಏಳುಬೀಳುಗಳನು ದಾಟಿಸಿ
ಕರೆದೊಯ್ಯುವೆ ಸ್ನೇಹ ಸುಧೆಯನುಣಿಸಿ

              ಶೈಲೂ......


Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು