217. ಮುಖದಲ್ಲಿ ನಗುವಿರಲಿ

ಮುಖದಲ್ಲಿ ನಗುವಿರಲಿ  ಮನವೂ ನಗುತಿರಲಿ
ಬೆಳಕು ಬಂದೊಡನೆ  ಓಡಿದಂತೆ ತಮ
ಮನದಲ್ಲಿ  ದೃಢ ನಿಲುವಿರಲು  ಕಷ್ಠಗಳು
ಬಂದಂತೆಯೇ  ಸಾಗುವುವು  ಮುಂದೆ

ಭರವಸೆಯಿರಲಿ  ಬದುಕಲ್ಲಿ  ಗೆಲ್ಲುವಾ ಛಲವಿರಲಿ
ಮುನ್ನುಗ್ಗಿ  ಬಾಳಲ್ಲಿ  ಸಾಧಿಸೋ  ಹಮ್ಮಿರಲಿ
ಮಾಡುವಾ  ಕಾರ್ಯದಲ್ಲಿ  ಪ್ರಾಮಾಣಿಕತೆಯಿರಲು
ಬಂದು ಬೀಳುವುವು  ಕಾಲ್ಮುಂದೆ  ಗೆಲುವು..........
             
                                        ಶೈಲೂ....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು