215 ಚಂದಿರ

ಹನಿಗವನ##

ಶೀರ್ಷಿಕೆ :  ಚಂದಿರ

ಕಾರಿರುಳ ಬೆಳಗುವ ಗಗನದ ಲಾಂದ್ರ
ನಿಶಿಯ ಬಾನ ನೊಸಲ ಸಿಂಧೂರ
ಸಾಗರೋತ್ಕರ್ಷಕೆ ಸಂಭ್ರಮ ತಂದ ಶಶಿ
ಪ್ರೇಮೋತ್ಸವಕೆ ಸ್ಪೂರ್ತಿ ನೀ ಅಹರ್ನಿಶಿ
ಹುಣ್ಣಿಮೆ ಹಾಲ್ಬೆಳದಿಂಗಳ ಹರಿಕಾರ
ಕವಿಮನ ಕಾವ್ಯೋತ್ಕರ್ಷಕೆ ಗೆಣೆಕಾರ

             ಶೈಲೂ.....

Comments