191 ನನ್ನ ಮನದಲ್ಲಿ ಮಿಂಚುವ ನಿಲುಕದ ನಕ್ಷತ್ರ ನೀನು

ನನ್ನ ಮನದಲ್ಲಿ ಮಿಂಚುವ ನಿಲುಕದ ನಕ್ಷತ್ರ ನೀನು
****************************************

ನೀನೇಕೆ ಬಂದೆ ಮನದೊಳಗೆ
ಕಟ್ಟುತ್ತಾ ಆಶಾ ಗೋಪುರ
ಮನೆಮಾಡಿನಿಂತೆ ಎದೆಯೊಳಗೆ
ಕುಣಿದುಬಿಟ್ಟೆ ಕಟ್ಟಿ ನೂಪುರ

ಕನಸುಗಳ ಹೊಸೆದೆ ನೂರಾರು
ಬಿತ್ತಿ ಮನದೊಳಗೆ ಆಸೆ 
ಅದೇನು ಮಾಧುರ್ಯ ಮನಕೆ
ನೀ ನುಡಿವ ಪ್ರೇಮಭಾಷೆ

 ನೀನಾದೆ ನನ್ನ ಜೀವದಜೀವ
ನಾ ಮೆಚ್ಚಿದ ಸ್ವಚ್ಛ ಮನಸು ನೀನೇ
ನೀನಾದೆ ನನ್ನ ಕಣ್ಣ ಕಾಂತಿ
ನನ್ನ ಬಾಳಿನ ಬೆಳಕು ನೀನು

ನೀ ಬಾಳ ಬಾನ ಚಂದ್ರಮಾ
ಬೆಳ್ಬೆಳದಿಂಗಳು ನೀನು
ಬಾಳ ಬೆಳಗೊ ರವಿಕಿರಣ
ಕಣ್ಣುಕೋರೈಸುವ ಪ್ರಭೆಯು ನೀನು

ನನ್ನ ಮನದಲ್ಲಿ ಮಿಂಚುವ
ನಿಲುಕದ ನಕ್ಷತ್ರ ನೀನು
ನಿನ್ನ ನೆನಪ ಅಮಲಲ್ಲಿಯೇ
ಜೀವ ಸವೆಸುವೆ ನಾನು

           ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು