179 ಬತ್ತೀಯಾ ಗೆಳೆಯ ಬತ್ತೀಯಾ ತಂದಿರುವೆ

ಬತ್ತೀಯಾ ಗೆಳೆಯಾ ಬುತ್ತೀಯಾ ತಂದಿರುವೆ
******************************************

ಬತ್ತೀಯಾ ಗೆಳೆಯಾ ಬುತ್ತೀಯಾ ತಂದಿರುವೆ
ತಂದಿರುವ ಬುತ್ತಿಲಿ  ಪ್ರೀತಿಯ  ಬೆರೆಸಿರುವೆ
ಬೆರೆಸಿರುವೆ ಅದರಲ್ಲಿ ನನ್ನ ಮನಸ್ಸಿನ ಆಸೆಯ
ಆಸೆಯ ಕೇಳು ಬಾ ಗೆಳೆಯ ಬುತ್ತಿಯ ಉಣ್ಣುತ್ತಾ
ಉಣ್ಣುತ್ತಾ ಪ್ರೀತಿಯಿಂದ ಮಾಡಿದ ಅಡುಗೆಯ
ಅಡುಗೆಯ ರುಚಿಯಲ್ಲಿ ನನ್ನನೇ ಮರೆತೀಯಾ
ಮರೆತೀಯಾ ನೀನಂದು ಕೊಟ್ಟಿದ್ದ ಭಾಷೆಯಾ
ಭಾಷೆಯಾ ಮರೆತಾರೆ ನನ್ನನೇ ಮರೆತಂತೆ
ಮರೆತುಹೋಗಲು ಬೇಡ ನಾನಿಟ್ಟ ಪ್ರೀತಿಯ
ಪ್ರೀತಿಯ ಗೆಳೆಯ ಹಂಗ್ಯಾಕೆ ನೀ ನಿಂತೆ
ನಿಂತು ನೋಡುತಲಿದ್ದರೆ ತುಂಬುವುದೇ ಹೊಟ್ಟೆ
ಹೊಟ್ಟೆ ತುಂಬಿದ ಬಳಿಕ ಕೈಕೈಹಿಡಿದು ನಡೆಯೋಣ
ನಡೆಯುತ್ತ ನಡೆಯುತ್ತ ಬದುಕನ್ನು ಕಟ್ಟೋಣ

          ಶೈಲೂ.....


Comments

Popular posts from this blog

343 ಒಗಟಿನ ರೂಪದ.ಚುಟುಕು

338 ಹುಸಿನಗೆಯ ಬೀರಿ

317 ಶಿವಸ್ತುತಿ