164 ಸ್ವಯಂಕೃತ

ಸ್ವಯಂಕೃತ
**********

ಯಾರ ಜರಿಯಲಿ ನಾನು
ಜರಿಯಲು ಕಾರಣವೇನು ??
ಅರಿಷಡ್ವರ್ಗಗಳ ಜೊತೆಗೆ
ವಿಶ್ವಾಸದಿಂದಿದ್ದು
ತೋಡಿಹೆ ಆಳದ  ಕೂಪ
ಮುಳುಗಿಹೆ ಅದರಲ್ಲೇ
ಆಸೆಯ ನೀರದು ಚಿಮ್ಮಿ
ಕೂಪ  ತುಂಬುತಿದೆ
ಈಜಲಾರದೆ ನಾನು
ಮುಳುಗುತಿಹೆನದರಲ್ಲೇ
ನನಗೆ ನಾನೇ ವೈರಿ
ದೂಷಿಸಲಿ  ಯಾರಲ್ಲಿ
ತಡೆಯಲಿ ನಾ ಹೇಗೆ
ಚಿಮ್ಮುತಿಹ ಆಸೆಯ  ಜಲವ
ಮೇಲೆದ್ದು  ನುಗ್ಗುತಿದೆ
ಉಸಿರುಗಟ್ಟಿಸುತ್ತಿದೆ
ನಾನೇ ತೋಡಿದ ಭಾವಿ
ಬಿದ್ದಿರುವೆ ಅದರೊಳಗೆ
ಎದ್ದುಬರಲಾರದೇ
ಮೊರೆಯಿಟ್ಟೆ ನಿನ್ನಲ್ಲಿ
ನೀನೊಬ್ಬನೇ   ರಕ್ಷೆ...
ಸಾಕಿನ್ನು  ಈ .ಶಿಕ್ಷೆ
ನೀಡು  ಕರುಣೆಯ ಭಿಕ್ಷೆ
ಬೇಕಿಲ್ಲ ಸತ್ವ ಪರೀಕ್ಷೆ
ಪ್ರೇಮಪೂರಿತ ಮನದೆ
ತೇಲಿಸೆನ್ನನು  ತಂದೆ
ದಾಟಿಸು ಭವ ಸಾಗರವ...

         ಶೈಲೂ..........

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು