153 ಸಂಧ್ಯೆ

ಸಂಧ್ಯೆ
******

ಹಗಲು ಸರಿದು ರವಿ
ವಿರಮಿಸುವ ಸಮಯ
ಚೆಲ್ಲಿ ಬಂಗಾರದೋಕುಳಿ
ಬಾನೆಲ್ಲಾ  ಸ್ವರ್ಣ ಮಯ

ರವಿ ಭೂರಮೆಯ ಮಡಿಲ
ಸೇರುವ ತವಕದಲ್ಲಿ ಆದ ಮರೆ
ಒಲವ ರಸಗಳಿಗೆಯ ಕಾಣಬಾರದೆಂಬಂತೆ
ಕಾರ್ಮೋಡಗಳ  ತೆರೆ

ಅಡಗಿ ಕುಳಿತಿದ್ದ ತಂಗಾಳಿ
ಗಿಡದೆಲೆಯ ಉದುರಿಸಿ
ಹರಡಿದ ಕರಿ ಮೋಡಗಳ
ಸರಸರನೆ ಚದುರಿಸಿ

ಚಿಲಿಪಿಲಿಯ ಹಾಡುವ
ಹಕ್ಕಿಗಳ ಸ್ವರದ ನಿನಾದ
ಹಾರಾಡಿ ಬಾನಲ್ಲಿ ಮೂಡಿಸಿದ
ಚಿತ್ತಾರವದು  ಬಲು ಮೋದ

ಬಾನಂಚಲಿ ರವಿ ಭೂರಮೆಯ
ಮಿಲನದ ಆಮೋದ
ಬೆಂದು ಬಸವಳಿದ್ದ ದಿನಕರನು
ಆಲಿಂಗನದೆ  ತಂಪಾದ

ಮಿಲನ ಮಹೋತ್ಸವಕೆ
ಬಾನಾಡಿಗಳ
ಚಿಲಿಪಿಲಿಯ  ಹಿಮ್ಮೇಳ
ಹೊಸಹುರುಪ  ತಾಳಿ  ಮತ್ತೆ
ಮೇಲೆದ್ದು ನಾಳೆ ಬೆಳಗುತ್ತಾನೆ  ಬಾಳ

        ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು