148 ಯಾರೀಕೆ ??

ಯಾರೀಕೆ ??
***********
ಆಕಾಶಕೆ ಬಣ್ಣ ಬಳಿದು
ಮೋಡಗಳ ಚಿತ್ತಾರ ಬಿಡಿಸಿ
ಸೂರ್ಯನಿಗೆ ಶಾಖ ತೊಡಿಸಿ
ಚಂದ್ರನಿಗೆ ತಂಪನುಡಿಸಿ
ಚುಕ್ಕಿಗಳಿಗೆ ಹೊಳಪನ್ನು
ತುಂಬಿದವಳು  ಯಾರೀಕೆ ... ???

ಬನದ ಸಿರಿಗೆ ಹಸಿರನುಡಿಸಿ
ಕಂಪಸೂಸೋ  ಹೂವ ಮುಡಿಸಿ
ಬೃಂಗಗಳ ಸಂಗೀತವಿರಿಸಿ
ಗಗನ ಚುಂಬಿ ಮರವ ಬೆಳೆಸಿ
ಜೀವ ಸಂಕುಲವ ಸೃಜಿಸಿದಾಕೆ
ಗಂಧರ್ವ ಕನ್ನಿಕೆ  ಯಾರೀಕೆ...???

ಜುಳು ಜುಳು ಹರಿವ ನದಿಗೆ
ಮಂಜುಳ ಮಂಗಳ ನಾದವಿರಿಸಿ
ಗಿರಿಶಿಖರಗಳ  ಮುಡಿಗೆ
ಮೋಡಗಳ  ಮುಕುಟವಿರಿಸಿ
ಮುಕುಟ ಮಣಿಯು ಹೊಳೆಯುವಂತೆ
ರವಿಕಿರಣವ ತೂರಿಬಿಟ್ಟ  ಕನ್ನಿಕೆ
ಯಾರೀಕೆ...???

ಮುತ್ತು ರತ್ನ ಪಚ್ಚೆ  ಹವಳ
ಅಡಗಿಸಿಟ್ಟು  ಕಡಲಿನಾಳ
ಭುವಿಯಲ್ಲೇ  ಸ್ವರ್ಗ ಸೃಜಿಸಿ
ಚೆಲುವ  ಮೆರೆಸಿ ಸೊಬಗ ಹರಿಸಿ
ಸೌಂದರ್ಯ ದ ಮೇಲೊದುಗೆ
ಹೊದ್ದ ಚೆಲುವೆ ಯಾರೀಕೆ..???
ನಿಸರ್ಗ ಕನ್ನಿಕೆ...!!!

         ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು