134 ಗಜಲ್.... ಹೂವು

.ಗಝಲ್ 
*******

ಅರಳಿ ನಗುವ ಹೂ ನಾನಾಗುವ ಆಸೆಯಾಗಿದೆ ಮನಕೆ
ಆ ದೇವ ಕೃಷ್ಣನ ಪದತಲದಿ ನಲಿಯುವ ಆಸೆಯಾಗಿದೆ ಮನಕೆ

ಘಮಘಮಿಸಿ ಹರಡಿ ಸೌರಭ ಬಿರಿದರಳಿ ನಲಿವ ಬಯಕೆ
ಸಿರಿದೇವಿಯ ಹೆರಳಿಗೆ ಸೌಂದರ್ಯವಾಗುವ ಆಸೆಯಾಗಿದೆ ಮನಕೆ

ಬಗೆಬಗೆಯ ಬಣ್ಣಗಳ  ಬಾಚಿತಬ್ಬಿ ಹೊದೆವ ಬಯಕೆ
ಮನಕಾನಂದವನಿತ್ತು ಸೆಳೆದೆಳೆವ ಆಸೆಯಾಗಿದೆ ಮನಕೆ

ಧನಮದದ ಸಮಾಜದಿ ಪ್ರಭಾವೀ ನಾಯಕರನು ನಾನೊಲ್ಲೆ
ಸಾಧಕರ ಕೊರಳನೇರಿ ಕೂರುವ ಆಸೆಯಾಗಿದೆ ಮನಕೆ

ಕಾಲಿನಡಿ ಹೊಸಕಿ ಬಿಸುಟುವ ರಕ್ಕಸರ ಬಳಿಸಾರಲು ನಾನೊಲ್ಲೆ
ಬೇಧ ತೊರೆದು ಬಾಚಿತಬ್ಬುವವರ ಕೊರಳೇರುವ ಆಸೆಯಾಗಿದೆ ಮನಕೆ

ಪರಿಶುದ್ಧ ಪ್ರೇಮದ ಸಂಕೇತ ನಾನಾಗುವ ಬಯಕೆ
ಸೌಹಾರ್ದ ಮನೆಮಂದಿರ ಅಕಲಂಕರಿಸುವ ಆಸೆಯಾಗಿದೆ ಮನಕೆ

ತೊರೆದೆಲ್ಲ ಬಂಧ ದೇಶಸೇವೆಯೊಂದೇ ಚಂದ
ಹಗಲಿರುಳು ಸೆಣೆಸಿದ ಹುತಾತ್ಮರ ಶಿರಶೈಲವೇರುವ ಆಸೆಯಾಗಿದೆ ಮನಕೆ

          ಶೈಲೂ...

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು