127 ನೆನಪು

ನೆನಪು
******

ನೆನಪೊಂದು ನೆಪಮಾತ್ರ
ನೀನಿರುವೆ ಸದಾ ಹಸಿರಾಗಿ
ನನ್ನ ಮನದಲ್ಲೇ
ನೆನಪುಗಳು
ನೋವುಣಿಸುತಿಹವು
ನೀನಿಲ್ಲಿರುವುದು
ನೆಪಮಾತ್ರವೇ ಹೇಳು..??
ನಸುನಗೆಯ ಬೀರಿ
ನನಸಾಗಿಸೊಮ್ಮೆ ಕನಸನು
ನೋವುಗಳೇನೇ ಬರಲಿ
ನಗುನಗುತಲೇ
ನಲಿವನ್ನೇ ಕಾಣುವೆ ನೋವಲೂ
ನವಿರಾದ ಭಾವನೆಯಲಿ
ನವಿಲು ಕುಣಿದಂತೆ
ನಿಜ, ನೆನಪು ನೋವುಣಿಸುವುದು
ನೋವೂ ನವಿರಾಯ್ತೇನಗೆ
ನೀ ಮನಾದೊಳಾವರಿಸಿ
ನಡೆದಾಡಿ ನೋಡಿದೆ
ನೆನಪಿನಂಗಳದಲ್ಲಿ
ನೋವು - ನವಿರು - ನಲಿವಿಲ್ಲ
ನೀನಿಲ್ಲದೇ......

          ಶೈಲೂ......

Comments

Popular posts from this blog

197 ತವರ ಸೆಳೆತ

343 ಒಗಟಿನ ರೂಪದ.ಚುಟುಕು

353ಅಮ್ಮ