122 ಶಾರ್ವರಿ ಸಂವತ್ಸರ

ಶಾರ್ವರಿ ನೀಡಬೇಕು ನೀನೇ ಅಭಯ
*******************************
ಶಾರ್ವರಿಗಿಂದು ಬೇಸರದ ಸ್ವಾಗತ
ವಿಕಾರಿ ತಂದಿತ್ತ ನೋವಲ್ಲಿ ಬಿಕ್ಕುತ
ಹೊಸ ವರುಷಕೆ ಸಂಭ್ರಮವಿನ್ನೆಲ್ಲಿ?
ಮಹಾಮಾರಿ ವಿಜೃಂಭಿಸುತಿಹಳಿಲ್ಲಿ

ಸಡಗರಕ್ಕಿಂದು ಬೇಸರದ ಛಾಯೆ
ಆವರಿಸಿಬಿಟ್ಟಿದೆ ಕೊರೊನಾ ಮಾಯೆ
ಬೆಲ್ಲವಿಲ್ಲವಿಲ್ಲಿ ಬರಿದೇ ಕಹಿಯ ಬೇವು
ಸಾವುನೋವುಗಳಲ್ಲಿ ರುಚಿಸೀತೆ ಮಾವು

ವಸಂತನಾಗಮನ ಪ್ರಕೃತಿಯ ಕೊಡುಗೆ
ಚಿಗುರು ಪಲ್ಲವಿಸಿ ತೊಡಿಸಿ ಹಸಿರುಡುಗೆ
ಸಂಭ್ರಮಿಸಲೂ ಬಿಡದಿಲ್ಲಿ ಕೊರೊನಾ ಭೂತ
ಹೊರಗಡಿಯಿಟ್ಟರೆ ನುಂಗಿಬಿಡುವೆನೆನುತ

ಇನ್ನೆಲ್ಲಿ ಹಬ್ಬಸಂಭ್ರಮ ಹೋಳಿಗೆ ಹೂರಣ
ನಡೆಸುತ್ತಿದೆಯಲ್ಲ ಕೊರೊನಾ ಮರಣ ಚಾರಣ
ದೇಶವೇ ಸ್ಥಗಿತ ಲಾಕ್ದೌನ್ ಅವಾಂತರ
ಶರನಾಗತಿಯೊಂದೇ ದೈವಕೆ ಹರಸೆಂದು ನಿರಂತರ

ಮನೆಯ ಸದಸ್ಯರು ಎಲ್ಲ ಚೆಲ್ಲಾಪಿಲ್ಲಿ
ಎಲ್ಲೆಲ್ಲಿರುವರೊ ಎಲ್ಲ ಅಲ್ಲಲ್ಲೇ ಬಂಧಿ
ಹೊರಗಡಿಯಿಡಲೂ ಸೋಂಕು ಸೊಕೀತೆಂಬ ಭಯ
ಶಾರ್ವರಿ ನೀಡಬೇಕು ತಾಯೆ ನೀನೇ ಅಭಯ

               ಶೈಲೂ....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು