116 ಎಲ್ಲಿರುವೆ ಮಾಧವ

🌹🌿🌹🌿🌹🌿🌹🌿🌹
ಗೋಪಿಯರರಸ
ಗೋಕುಲದೊಡೆಯಾ
ಮಾಧವ ನೀನೂ  ಎಲ್ಲಿರುವೆ
ಯಾದವ ಕುಲದಾ
ಕೀರುತಿ ನೀನು
ನಿನ್ನ  ಬರುವಿಗಾಗೇ  ಕಾದಿರುವೆ.......

ನಂದನ ವನದಾ
ತರುಲತೆ ಹೂಗಳು
ಕೋರುತ ನಿಂತಿದೇ ಸ್ವಾಗತವಾ
ಕೋಕಿಲ ಗಾಯನ
ನವಿಲಿನ  ನರ್ತನ
ರಮಿಸಲು  ಕಾದಿದೆ
ನಿನ ಮನವಾ........

ಗೆಳೆಯರ  ಗುಂಪದು
ನಿನ್ನೊಡನಾಡುವ ತವಕದಿ
ತುದಿಗಾಲಿನಲ್ಲೇ  ನಿಂತಿಹುದು
ಚಿನ್ನಿ ಕೋಲು ಚಂಡು
ಬುಗುರಿಯ  ಹಿಡಿದು
ನಿನ್ನಾಗಮನಕೆ  ಕಾದಿಹುದು......

ಚಲಿಸುವ  ಮೋಡದಿ
ಹರಿಯುವ  ನದಿಯಲಿ
ಎಲ್ಲೆಡೆ ನಿನ್ನಾ  ನಡೆಯಿಹುದು
ಜೀವದ ಜೀವ
ಮೋಹಕ  ಮಾಧವ
ನಿನ್ನೆಡೆಗೆ  ನನ್ನ  ಮನವಿಹುದು.....

              ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು