115. ಮರೆತನೇಕೆ ಮಾಧವ

🌼🍁🌼🍁🌼🍁🌼🍁🌼
ಮರೆತನೇಕೆ  ಮಾಧವ
******************
ಹೇಳೇ  ಗೆಳತಿ
ಮರೆತನೇಕೆ  ಮಾಧವ
ತುಂಬಿ ಮನದಲಿ ಪ್ರೀತಿ
ಕಾದಿಹೆ  ಅರಿಯನೇನೋ ಅವ

ಕಾಣದು  ಏನೂ
ಕಣ್ಣಲ್ಲಿ  ತುಂಬಿಹನವನು
ಮನ ಬಯಸದು ಏನೂ
ಹೃದಯದಿ  ನೆಲೆಸಿಹನವನು

ಚಂದ್ರನ ಶೀತಲ 
ಮೊಗದವನವನು
ಸೂರ್ಯನ ಕಿರಣದಿ
ಬೆಳಗುತಲಿಹನು

ಅರಳುವ  ಹೂವಲಿ
ನಗುತಿಹನವನು
ಪ್ರೀತಿ ಗೆ ಸೋಲಲು
ಮನತುಂಬಿಹನು

ತೀಡುವ  ತಂಗಾಳಿ
ಅವನದೇ ಉಸಿರು
ತಾಕಿದೆ ಎನ್ನನು
ಅವನ ಬಿಸಿಯುಸಿರು

ಅವನಡಿ ಇಡುವೆಡೆ
ತುಂಬಿದೆ  ಹಸಿರು
ಅವನದೇ ಧ್ಯಾನವು
ಪ್ರತಿಯುಸಿರುಸಿರು

ಕಾಡುವೆ  ಏತಕೆ
ಬಾರದೆ  ನೀನು
ನನ್ನಯಾ ಭಕ್ತಿಯು
ಹುಸಿಯಿಹುದೇನು

ಕೇಳೇಲೋ  ಮಾಧವ
ಬಾರದೆ ನೀನು
ನಿನ್ನ ಈ  ರಾಧೆಯು
ಬದುಕುವಳೇನು...

         ಶೈಲೂ........

ಚಿತ್ರ ಕೃಪೆ :-  ಸುರಭಿ ಲತಾ

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು