112. ಎಲ್ಲಿಗೆ ಪಯಣ

ಎಲ್ಲಿಗೆ ಪಯಣ


ಎಲ್ಲಿಗೆ ಪಯಣ
ಯಾವುದೀ ಕಾಣದ ದಾರಿ
ಬರದ ಮರುಭೂಮಿಯಲಿ
ಏಕಾಂಗಿ ಸಂಚಾರಿ...!!

ದೃಷ್ಟಿಗೆ ನಿಲುಕಿದಷ್ಟು ದೂರ
ಬರಿದೇ ಬೆಂಗಾಡು ಮರಳು
ಜೊತೆ ಯಾರಿಲ್ಲ ಸಂಗಾತಿ
ಅಣಕಿಸುತಿದೆ ನನ್ನದೇ ನೆರಳು..!!

ಹಿಂತಿರುಗಿ ನೋಡಲೇನಿಲ್ಲ
ಬರಿದೇ ಹೂತ ಹೆಜ್ಜೆಯ ಗುರುತು
ಮುಂದಡಿಯಿಡಲೇನೂ ಕಾಣದಲ್ಲ
ಕರಗಿತಾಸೆ ಮರುಭೂಮಿಯಲಿ ಬೆರೆತು

ಬಿಸಿಲ ಝಳ ಸುಡುತಿದೆ ನೆತ್ತಿ
ತೀರಿಸಲಾರದ ದಾಹ ಬೆನ್ನತ್ತಿ
ಸುತ್ತಿ ನೆತ್ತಿಗೊಂದು ಮುಂಡಾಸು
ಹೊರಟೆ ಹುಡುಕುತ್ತ ಒಯಸಿಸ್ಸು..!!

ದಾಹ ತೀರುವುದೆಂದೋ
ದಾರಿ ಕಾಣುವುದೆಂದೋ
ಬಳಲಿಕೆಯಲಿ ನಡೆಯುತ್ತ
ಗುರಿ ಸೇರುವುದೆಂದೋ...!!

            ಶೈಲೂ......

ಚಿತ್ರಕೃಪೆ :  Cskar Rao 
Thank u sir🙏

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು