110. ಶಾರದೆ

----:  ಶಾರದೆ :----
***************

ಕಂಡೆನಾ..ಕಂಡೆನಾ..
 ಶಾರದಾಂಬೆಯಾ
ಶ್ರೀ ಶಾರದಾಂಬೆಯಾ..
ಕನಸಲಿ  ಬಂದು  
ಮನಸಲಿ ನಿಂದು
ಹರಸಿದ ತಾಯಿಯ  ಕಂಡೆನಾ....

ಜುಳು ಜುಳು ಎನ್ನುತ
 ಹರಿಯುವ ನದಿಯಲಿ
ಮೋಡದ ಮರೆಯಲಿ
 ಇಣುಕುವ  ಶಶಿಯಲಿ
ವೀಣಾ ವಾರುಣಿ
ನಾದದ ಅಲೆಯಲಿ
ಕೋಗಿಲೆ ಕಂಠದಿ
ನವಿಲಿನ ನಾಟ್ಯದಿ  ಕಂಡೆನಾ....

ಮಾನವ ಕುಲದಾ
ಬುದ್ಧಿರೂಪಿಣಿ
ಸರ್ವಮಂಗಳೇ
ಬ್ರಹ್ಮನ ರಾಣಿ
ಜ್ಞಾನದಾಯಿಕೆ
ಹಂಸವಾಹಿನಿ
ವರವನು ನೀಡಿ
ಹರಸಿದ ಮಾತೆಯ ಕಂಡೆನಾ...

ವೀಣಾ ಪುಸ್ತಕ 
ಮಾಲಾಧಾರಿಣಿ
ಶಾರದೆ ಸರಸ್ವತಿ
ವಿದ್ಯಾದಾಯಿನಿ
ಶ್ವೇತಾಂಭರಧರೆ
ಸುಂದರ ರೂಪಿಣಿ
ಹರಸುತ ಬಂದಾ
ಕರುಣಾಗ್ರಣಿಯಾ ಕಂಡೆನಾ...

         ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು